ಉಪಚುನಾವಣೆ ರದ್ದು ಕೋರಿ ಮತ್ತೊಂದು ಪಿಐಎಲ್​

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 3 ರಂದು ನಡೆಯಲಿರುವ ಲೋಕಸಭಾ ಉಪಚುನಾವಣೆಯನ್ನ ರದ್ದು ಮಾಡುವಂತೆ ಕೋರಿ ಮತ್ತೊಂದು ಪಿಐಎಲ್​ ಸಲ್ಲಿಕೆ ಆಗಿದೆ. ಮಂಡ್ಯ, ಶಿವಮೊಗ್ಗ, ಬಳ್ಳಾರಿ ಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಯನ್ನ ರದ್ದು ಮಾಡುವಂತೆ ಕೋರಿ ವಕೀಲ ಎ.ಪಿ.ರಂಗನಾಥ್ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಅರ್ಜಿಯಲ್ಲಿ ಈ ಚುನಾವಣೆಯಿಂದ ಜನರ ತೆರಿಗೆ ಹಣ ಪೋಲು ಆಗ್ತಿದೆ. ಹೊಸ ಸಂಸದರಿಗೆ ಕೆಲವೇ ತಿಂಗಳು ಕಾಲಾವಕಾಶ ಸಿಗಲಿದೆ. ಹೀಗಾಗಿ ಚುನಾವಣೆ ತಡೆ ಹಿಡಿಯಬೇಕು. ಅಲ್ಲದೇ ಕೋರ್ಟ್​ ಇದರ ವಿಚಾರಣೆಯನ್ನ ತುರ್ತಾಗಿ ಕೈಗೆತ್ತಿಕೊಳ್ಳಬೇಕು ಅಂತಾ ಮನವಿ ಮಾಡಿದ್ದಾರೆ. ನಿನ್ನೆ ತುಮಕೂರು ಮೂಲದ ರಮೇಶ್ ನಾಯ್ಕ್ ಅನ್ನೋರು ಇದೇ ಕಾರಣವನ್ನು ಇಟ್ಟುಕೊಂಡು ಹೈಕೋರ್ಟ್​ಗೆ ಪಿಐಎಲ್ ಸಲ್ಲಿಕೆ ಮಾಡಿದ್ದರು.