ಮತ ಎಣಿಕೆ ಮುನ್ನವೇ ಅನಿತಾ ಕುಮಾರಸ್ವಾಮಿ ಜಯಭೇರಿ ಪೋಸ್ಟರ್

ರಾಮನಗರ: ರಾಮನಗರ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬಿಳಲಿದೆ. ಆದ್ರೆ ಬಿಜೆಪಿ ಹಾಗೂ ಕಾಂಗ್ರೆಸ್, ಜೆಡಿಎಸ್‌ ಪಕ್ಷದ ನಾಯಕರಲ್ಲಿ ಪ್ರತಿಷ್ಠೆಯ ಕಣವಾಗಿರುವ ಉಪ ಚುನಾವಣೆ ಎಲ್ಲಾ ಅಭ್ಯರ್ಥಿಗಳಲ್ಲೂ ಕೂತುಹಲ ಮೂಡಿಸಿದೆ. ರಾಮನಗರದಿಂದ ಜೆಡಿಎಸ್‌ ಪಕ್ಷದಿಂದ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಆದ್ರೆ, ಅಚ್ಚರಿ ಅಂದ್ರೆ ಮತ ಎಣಿಕೆ ಆರಂಭದಲ್ಲೇ ಅನಿತಾಕುಮಾರಸ್ವಾಮಿ ಜಯಭೇರಿ ಎಂಬ ಭಾವಚಿತ್ರವಿರುವ ಪೋಸ್ಟರ್‌ ರಾಮನಗರದಾದ್ಯಂತ ರಾರಾಜಿಸುತ್ತಿವೆ. ಫಲಿತಾಂಶಕ್ಕೂ ಮುನ್ನವೇ ಅನಿತಾ ಕುಮಾರಸ್ವಾಮಿ ಅವರ ಪೋಸ್ಟರ್ ಕಾಣಿಸಿಕೊಂಡಿವೆ. ಈ ಮೂಲಕ ರಾಮನಗರ ಉಪ ಚುನಾವಣೆಯಲ್ಲಿ ಅನಿತಾ ನಿಜಕ್ಕೂ ಜಯ ಗಳಿಸ್ತಾರಾ? ಎಂಬುದು ಇವತ್ತಿನ ಫಲಿತಾಂಶದಲ್ಲಿ ತಿಳಿಯಲಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv