ಮಂಜುನಾಥನ ದರ್ಶನ ಪಡೆದ ಅನಿತಾ ಕುಮಾರಸ್ವಾಮಿ

ಮಂಗಳೂರು: ಅನಿತಾ ಕುಮಾರಸ್ವಾಮಿ ಅವರನ್ನ  ರಾಮನಗರ ವಿಧಾನಸಭಾ ಉಪಚುನಾವಣೆಯ ಜೆಡಿಎಸ್​ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಅನಿತಾ ಕುಮಾರಸ್ವಾಮಿ ಟೆಂಪಲ್‌ರನ್‌ಶುರು ಮಾಡಿದ್ದಾರೆ. ಅವರು ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ದೇವರ ಎದುರು ಬಿ-ಫಾರ್ಮ್‌ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಅವರು, ಶೃಂಗೇರಿಗೆ ತೆರಳಿ ಶಾರದಾ ದೇವಿಗೆ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ನಾಮಪತ್ರ ಸಲ್ಲಿಸುವ ಮುಂಚೆ ದೇವಸ್ಥಾನಕ್ಕೆ ಬಂದಿದ್ದೇನೆ. ಧರ್ಮಸ್ಥಳಕ್ಕೆ ಆಗಾಗ ಬರುತ್ತಿರುತ್ತೇನೆ. ಇಂದು ಕೂಡ  ಆಗಮಿಸಿ ಪೂಜೆ ಸಲ್ಲಿಸಿದ್ದೇನೆ ಎಂದರು. ಎರಡು ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎನ್ನುವ ಕೋಡಿಮಠ ಶ್ರೀಗಳ ಭವಿಷ್ಯದ ಕುರಿತು ಮಾತನಾಡಿದ ಅವರು, ಕೋಡಿಮಠ ಸ್ವಾಮಿಗಳ ಬಗ್ಗೆ ಅಪಾರ ಗೌರವ ಇದೆ. ಕೋಡಿಮಠ ಸ್ವಾಮಿಗಳು ಹೀಗೆ ಹೇಳಬಾರದಿತ್ತು. ಎಲ್ಲವೂ ದೇವರು ನಿರ್ಧರಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv