ಖಂಡಿತವಾಗಿ ಭಾರೀ ಅಂತರದಲ್ಲಿ ಗೆದ್ದು ಬರುತ್ತೇನೆ -ಅನಿತಾ ಕುಮಾರಸ್ವಾಮಿ

ರಾಮನಗರ: ಈ ಹಿಂದೆ ಸಾಮಾನ್ಯ ಕಾರ್ಯಕರ್ತನಿಗೂ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿತ್ತು. ಈಗ ಕಾರ್ಯಕರ್ತರು ನನಗೇ ನಿಲ್ಲುವಂತೆ ಒತ್ತಡ ಹಾಕಿದರು, ಹಾಗಾಗಿ ನಾನು ಸ್ಪರ್ಧೆ ಮಾಡಬೇಕಾಯಿತು ಎಂದು ರಾಮನಗರ ಕ್ಷೇತ್ರದ ಜೆಡಿಎಸ್- ಕಾಂಗ್ರೆಸ್ ದೋಸ್ತಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರದಲ್ಲಿ ಫಸ್ಟ್ ನ್ಯೂಸ್ ಜೊತೆ ಮಾತನಾಡಿದ ಅವರು, ಕ್ಷೇತ್ರದ ಜನರ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಕ್ಷೇತ್ರದ ಜನರಿಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಮಾವ ದೇವೇಗೌಡರು, ಪತಿ ಕುಮಾರಸ್ವಾಮಿ ಅವರಿಗೆ ಜನರು ಆಶೀರ್ವಾದ ಮಾಡಿದ್ದಾರೆ. ಈಗ ನನ್ನ ಮೇಲೂ ಕ್ಷೇತ್ರದ ಜನರ ಅಭಯ ಇದೆ. ಕಾಂಗ್ರೆಸ್- ಜೆಡಿಎಸ್‌ ಎರಡೂ ಪಕ್ಷಗಳು ಒಟ್ಟಿಗೆ ಚುನಾವಣೆ ಎದುರಿಸುತ್ತಿದ್ದೇವೆ. ಹಲವಾರು ಬಾರಿ ಉಭಯ ಪಕ್ಷಗಳ ಕಾರ್ಯಕರ್ತರ ಸಭೆ ನಡೆಸಿದ್ದೇವೆ. ಈಗ ದೋಸ್ತಿ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ, ಅಸಮಾಧಾನ ಇಲ್ಲ. ಕ್ಷೇತ್ರದಲ್ಲಿ ಪತಿ ಕುಮಾರಸ್ವಾಮಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇನ್ನು ಮುಂದೆ ಅವರ ಮಾರ್ಗದರ್ಶನದಲ್ಲಿ ನಾನು ಹೆಚ್ಚಿನ ಕೆಲಸ ಮಾಡ್ತೇನೆ. ಪ್ರತಿಸ್ಪರ್ಧಿ ಯಾರಾದ್ರೂ ಆಗಿರಲಿ ಚುನಾವಣೆ ಎದುರಿಸುತ್ತೇವೆ. ಡಿ.ಕೆ ಬ್ರದರ್ಸ್ ಸೇರಿದಂತೆ ಎಲ್ಲರ ಬೆಂಬಲ ಇದೆ. ನೂರಕ್ಕೆ ನೂರು ಖಂಡಿತವಾಗಿಯೂ ಭಾರೀ ಅಂತರದಲ್ಲಿ ನಾನು ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv