‘ನಿಮ್ಮ ಕುಟುಂಬಕ್ಕಾಗಿ ಹಗಲುರಾತ್ರಿ ದುಡಿದಿದ್ದೇವೆ, ಆ ಋಣಕ್ಕಾದ್ರೂ ಕೆಲ್ಸ ಮಾಡ್ಕೊಡಿ’

ರಾಮನಗರ: ನಿಮ್ಮ ಮಾವನವರಿಗೆ ಹಗಲು ರಾತ್ರಿ ಎನ್ನದೇ ಚುನಾವಣೆ ಪ್ರಚಾರ ಮಾಡಿದ್ದೇವೆ. ನಿಮ್ಮ ಯಜಮಾನರು ಸಿಎಂ, ನೀವು ಶಾಸಕಿ ಆಗಿದ್ದೀರಿ. ನಮ್ಮ ಕಷ್ಟಕ್ಕೆ ನಿಮ್ಮನ್ನು ಕೇಳದೇ ಇನ್ನಾರನ್ನು ಕೇಳೋಣ ಎಂದು ಅನಿತಾ ಕುಮಾರಸ್ವಾಮಿಗೆ ವ್ಯಕ್ತಿಯೊಬ್ಬರು ದುಂಬಾಲು ಬಿದ್ದ ಪ್ರಸಂಗ ರಾಮನಗರದಲ್ಲಿ ನಡೆದಿದೆ.

ಜೆಡಿಎಸ್ ಕಾರ್ಯಕರ್ತನೂ ಆದ, ಅರಣ್ಯ ಇಲಾಖೆಯ ಗುತ್ತಿಗೆ ನೌಕರನೊಬ್ಬ ಹೀಗೆ ಶಾಸಕಿ ಅನಿತಾರಿಗೆ ಪ್ರಶ್ನಿಸಿದ್ದಾನೆ. ನಿಮ್ಮ ಮಾವನವರಿಗೆ ಹಗಲು ರಾತ್ರಿ ಎನ್ನದೇ ಕ್ಯಾನ್ವಾಸ್ ಮಾಡಿದ್ದೇವೆ. ಆ ಋಣಕ್ಕಾದ್ರೂ ನಮ್ ಕೆಲಸ ಮಾಡಿಕೊಡಿ. 1800 ಜನ ಆಯಾಗಳನ್ನ ಪರ್ಮನೆಂಟ್ ಮಾಡ್ತಾರೆ. ನಾವು 600 ಜನ ಆಯಾ ಇದ್ದೀವಿ. ಯಾಕ್ ಪರ್ಮನೆಂಟ್ ಮಾಡೋಕೆ ಆಗಲ್ಲ ಎಂದು ಆತ ಕೇಳಿದ. ಇದಕ್ಕೆ ಪ್ರತಿಕ್ರಿಯಿಸಿದ ಅನಿತಾ ಕುಮಾರಸ್ವಾಮಿ, ಮುಖ್ಯಮಂತ್ರಿ ಬಳಿ ಅಪಾಯಿಂಟ್ಮೆಂಟ್ ಕೊಡಿಸ್ತೀನಿ. ಬೆಂಗಳೂರಿಗೆ ಬಂದು ಅವರನ್ನೇ ಕೇಳಿ ಎಂದು ಹೇಳಿದರು.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv