ಅಂಗನವಾಡಿ ಬೇಳೆ-ಕಾಳಲ್ಲಿ ಇರೋದು ಪೌಷ್ಠಿಕತೆಯಲ್ಲ, ಹುಳಗಳು!

ನೆಲಮಂಗಲ: ಪುಟ್ಟ ಮಕ್ಕಳು ಮತ್ತು ಬಾಣಂತಿಯರು ಪೌಷ್ಠಿಕ ಆಹಾರ ಸೇವಿಸಲಿ ಅಂತ ಸರ್ಕಾರ ಉಚಿತ ಅಕ್ಕಿ, ಬೇಳೆ ಮುಂತಾದ ದವಸ ಧಾನ್ಯಗಳನ್ನು ನೀಡುತ್ತದೆ. ಆದ್ರೆ ಸರ್ಕಾರ ನೀಡೋ ಈ ಅಕ್ಕಿ, ಬೇಳೆಯನ್ನ ಈ ಗ್ರಾಮದವರು ತಿನ್ನೊದಿರ್ಲಿ, ಮುಟ್ಟೋದಕ್ಕೂ ಅಸಹ್ಯ ಪಡ್ತಾರೆ ಯಾಕಂದ್ರೆ ಅಕ್ಕಿಯ ತುಂಬಾ ಹುಳಗಳು, ಹಾಳಾಗಿರುವ ಬೆಳೆ ಕಾಳುಗಳು.

ಇಂತಹ ಪದಾರ್ಥಗಳನ್ನು ಗರ್ಭಿಣಿಯರಿಗೆ ಮತ್ತು ಪುಟ್ಟ ಮಕ್ಕಳಿಗೆ ವಿತರಿಸಲಾಗುತ್ತಿದೆ ಅಂತಾ ನೆಲಮಂಗಲ ತಾಲೂಕಿನ ಬರಗೇನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಪದಾರ್ಥಗಳ ತುಂಬ ಬರಿ ಹುಳಗಳೇ ತುಂಬಿವೆ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಲಮಂಗಲ ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ವತಿಯಿಂದ ಈ ಪದಾರ್ಥಗಳನ್ನು ವಿತರಿಸಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಕೂಡ ಈ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

Leave a Reply

Your email address will not be published. Required fields are marked *