ಕಳ್ಳರ ಬೇಟೆಯಾಡಿದ ಆನೆಕಲ್ ಉಪವಿಭಾಗದ ಪೊಲೀಸರು

ಆನೆಕಲ್:  ಆನೆಕಲ್ ಉಪವಿಭಾಗದ ಪೊಲೀಸರು ಈ ಬಾರಿ ಭರ್ಜರಿ ಬೇಟೆಯಾಡಿದ್ದಾರೆ. ಮನೆ ಕಳವು, ದರೋಡೆ ಸೇರಿದಂತೆ ಸುಮಾರು 15 ಪ್ರಕರಣಗಳನ್ನ ಬೇಧಿಸಿದ್ದಾರೆ. ಕುಖ್ಯಾತ ಮನೆಗಳ್ಳರಾದ ಕೋಲಾರದ ಧರ್ಮ, ಆನೇಕಲ್​ ಮಂಜ, ದೇವರಾಜು, ಜಿಗಣಿಯ ಶಂಕರ, ಮಂಡ್ಯದ ವೆಂಕಟೇಶ್​ರನ್ನ ಬಂಧಿಸಿದ್ದಾರೆ. ಆರೋಪಿಗಳಿಂದ 510 ಗ್ರಾಂ ಚಿನ್ನ, 12 ಲಕ್ಷ ನಗದು, 1 ಕಾರು, 6 ಬೈಕ್ ಸೇರಿದಂತೆ 2635 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
ಇನ್ನು ಹೆಬ್ಬಗೋಡಿ ಪೊಲೀಸರು ಮಂಡ್ಯ ಮೂಲದ ಸಿದ್ ಅಲಿಯಾಸ್ ನಾಗರಾಜ್ ಎಂಬ ಕುಖ್ಯಾತ ಮನೆಗಳ್ಳನನ್ನ ಬಂಧಿಸಿದ್ದಾರೆ. ಆರೋಪಿಯಿಂದ ₹14 ಲಕ್ಷ ಮೌಲ್ಯದ 485 ಗ್ರಾಂ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ.
ಅಲ್ಲದೇ ಸರ್ಜಾಪುರ ಪೊಲೀಸರಿಂದ ಕಟ್ಟಡ ಸಾಮಗ್ರಿಗಳನ್ನ ಕಳವು ಮಾಡುತ್ತಿದ್ದ ಆಸಾಮಿಗಳಾದ ತಮಿಳುನಾಡು ಮೂಲದ ರಾಜೇಂದ್ರನ್, ಸತ್ಯರಾಜು ಹಾಗೂ ನೆಹರು ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 1 ಕೆ.ಜಿ ಚಿನ್ನ ಸೇರಿದಂತೆ ಬರೋಬ್ಬರಿ ₹60 ಲಕ್ಷ ಮೌಲ್ಯದ ಮಾಲು ಜಪ್ತಿ ಮಾಡಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv