ಆನೇಕಲ್​ನಲ್ಲಿ ಕರಗ ಮಹೋತ್ಸವದ ಸಂಭ್ರಮ

ಆನೇಕಲ್: ಬೆಂಗಳೂರಿನಲ್ಲಿ ಕರಗ ಮಹೋತ್ಸವ ನಡೆಯುತ್ತಿರುವ ಸಂದರ್ಭದಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ನಲ್ಲೂ ಕರಗ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ. ಇಂದು ನಸುಕಿನ ಜಾವ 3 ಗಂಟೆಗೆ ಚಾಲನೆ ನೀಡಲಾಯಿತು. ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಮುತ್ಯಾಲಮ್ಮ ದ್ರೌಪದಿ ದೇವಿಯ ಕರಗ ಮಹೋತ್ಸವ ಪ್ರಾರಂಭವಾಗಿದೆ. ಶ್ರೀರಾಮನವಮಿಯ ಪ್ರಯುಕ್ತ ನಡೆಯುವ ಕರಗ ಮಹೋತ್ಸವ ವಿಜೃಂಭಣೆಯಿಂದ ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿದೆ. ಕರಗ ಹೊತ್ತ ಪೂಜಾರಿ ದೇವಾಲಯದ ಹೊರ ಬರುತ್ತಿದ್ದಂತೆ ಭಕ್ತರ ಕರತಾಡನ ಮುಗಿಲು ಮುಟ್ಟಿತ್ತು. ಕರಗ ದೇವಾಲಯದ ಹೊರಬರುತ್ತಿದ್ದಂತೆ ವೀರ ಕುಮಾರರು ದಿಕ್ ದೀಲ್ ಎಂದು ದೇಹ ದಂಡಿಸಿಕೊಳ್ಳುತ್ತಿದ್ದರು.

Leave a Reply

Your email address will not be published. Required fields are marked *