ಕಲ್ಪತರು ನಾಡಲ್ಲಿ ಆಂಧ್ರ ನಾಯಕನಿಗೆ ಸನ್ಮಾನ ..!

ಪಾವಗಡ: ತುಮಕೂರು ಜಿಲ್ಲೆಯ ಗಡಿಭಾಗವಾದ ಪಾವಗಡ ತಾಲೂಕಿನ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಂಧ್ರ ಪ್ರದೇಶದ ಮಾಜಿ ಸಚಿವ ರಘುವೀರಾ ರೆಡ್ಡಿ ಉಪಸ್ಥಿತರಿದ್ದರು. ಕರ್ನಾಟಕದಲ್ಲಿ ಆಂಧ್ರದ ನಾಯಕನ ರಾಜಕೀಯ ಫ್ರಭಾವ ಹಾಗೂ ಸ್ಥಳಿಯ ರಾಜಕಾರಣಿಗಳೂಂದಿಗೆ ಅವರ ಒಡನಾಟದ ಬಗ್ಗೆ ಕೂತುಹಲ ಮೂಡಿಸಿದೆ. ರಘುವೀರಾ ರೆಡ್ಡಿ ಸದ್ಯ ಎಪಿಸಿಸಿ ಅಧ್ಯಕ್ಷರಾಗಿದ್ದಾರೆ.
ರಾಜ್ಯ ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸರ್ಕಾರಿ ಸಭೆಯಲ್ಲಿ ನರೆಯ ರಾಜ್ಯದ ಕಾಂಗ್ರೆಸ್ ನಾಯಕ ರಘುವೀರಾ ರೆಡ್ಡಿಗೆ ಸನ್ಮಾನ ಮಾಡಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ಬೇರೆ ರಾಜ್ಯದ ನಾಯಕ ರಘುವೀರಾರೆಡ್ಡಿಗೆ ಸನ್ಮಾನ ಮಾಡಿರುವುದು ಸ್ಥಳೀಯರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂರ್ಪಕಿಸಿ:contact@firstnews.tv