ಯೂನಿಫಾರ್ಮ್‌ ಧರಿಸೋರಿಗೆ ಈ ಚಿತ್ರ ಅರ್ಪಣೆ!

ಇಂದು ತೆರೆಕಂಡಿರೋ ಹೇಮಂತ್‌ರಾವ್ ನಿರ್ದೇಶನದ ಕವಲುದಾರಿ ಸಿನಿಮಾಗೆ ಉತ್ತಮ ವಿಮರ್ಶೆ ಕೇಳಿಬರ್ತಿದೆ. ಅದ್ರಲ್ಲೂ ಚಿತ್ರ ನೋಡಿ ಆಚೆ ಬಂದವರ ಮನಸ್ಸಲ್ಲಿ ಒಂದು ಬದಲಾವಣೆ ಗಾಳಿ ಬೀಸಲಿದೆ. ಸಮಾಜದಲ್ಲಿ ಸಮವಸ್ತ್ರದಲ್ಲಿ ಕಾರ್ಯನಿರ್ವಹಿಸುತ್ತಿರೋ ಪ್ರತಿಯೊಬ್ಬರ ಮೇಲೆ ವಿಶೇಷವಾದ ಅಭಿಮಾನ ಮೂಡೋದು ಖಂಡಿತ ಅಂತಾ ಹೇಳ್ತಿದ್ದಾರೆ. ಚಿತ್ರದಲ್ಲಿ ಒಬ್ಬ ದಕ್ಷ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ ನಿರ್ವಹಿಸಿರೋ ಹಿರಿಯನಟ ಅನಂತ್‌ನಾಗ್ ಚಿತ್ರದ ಬಗ್ಗೆ ಹೇಳೋದಿಷ್ಟು.

‘ಚಿತ್ರದಲ್ಲಿ ನನ್ನದು ಒಬ್ಬ ಪೊಲೀಸ್‌ ಇನ್ಸ್‌ಪೆಕ್ಟರ್ ಪಾತ್ರ. ರಿಷಿ ಕೂಡ ಪ್ರಾಮಾಣಿಕ ಪೊಲೀಸ್‌. ರಿಷಿ ಪಾತ್ರವನ್ನು ಯಾವುದೇ ಒಬ್ಬ ಪ್ರಾಮಾಣಿಕ ಪೊಲೀಸ್‌ ಅಧಿಕಾರಿ ರಿಲೇಟ್‌ ಮಾಡಿಕೊಳ್ಳಹುದು. ಹೀಗಾಗೇ ನಿರ್ದೇಶಕರು ಚಿತ್ರವನ್ನ ಡೆಡಿಕೇಟೆಡ್‌ ಟು ಮೆನ್ ಅಂಡ್ ವಿಮೆನ್ ಇನ್ ಯುನಿಫಾರ್ಮ್ ಅಂತಾ ಹೇಳಿದ್ದಾರೆ. ಅಂದ್ರೆ ಸಮಾಜದಲ್ಲಿ ಯುನಿಫಾರಂ ತೊಟ್ಟು ಕೆಲಸ ಮಾಡೋ ಯಾರೇ ಆಗಿರಬಹುದು ಆರ್ಮಿ, ನೇವಿ, ಪ್ಯಾರಾಮಿಲಿಟರಿ, ಬಸ್ ಕಂಡಕ್ಟರ್,ಡ್ರೈವರ್, ಡಾಕ್ಟರ್, ನರ್ಸ್, ಸೆಕ್ಯುರಿಟಿ ಹೀಗೆ.. ಯುನಿಫಾರಂ ಅಂದ್ರೆ ಶಿಸ್ತು ಬದ್ಧತೆ ಡೆಡಿಕೇಶನ್ ಈ ಮೂರರ ಪ್ರತೀಕವಾಗಿದೆ’ ಅಂತಾರೆ ಅನಂತ್ ನಾಗ್‌.