ಸಚಿವ ಅನಂತಕುಮಾರ ಹೆಗಡೆಗೆ ಮತ್ತೆ ಬೆದರಿಕೆ ಕರೆ, ಜೀವ ತೆೆಗೆಯುತ್ತೇವೆ ಎಂದು ಧಮ್ಕಿ..!

ಉತ್ತರ ಕನ್ನಡ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ ಬಂದಿದೆ. ನಿನ್ನೆ ರಾತ್ರಿ 1.45ಕ್ಕೆ ಸಚಿವರ ಮನೆಗೆ ಕರೆ ಮಾಡಿ ದುಷ್ಕರ್ಮಿಯೊಬ್ಬ ಜೀವ ಬೆದರಿಕೆ ಹಾಕಿದ್ದಾನೆ. ಸಚಿವರ ಮನೆಯಲ್ಲಿದ್ದ ಲ್ಯಾಂಡ್ ಲೈನ್ ನಂಬರ್‌ಗೆ 0022330000 ನಂಬರ್ ನಿಂದ ಕರೆ ಬಂದಿದ್ದು, ಆಗ ಸಚಿವರು ಮನೆಯಲ್ಲಿಲ್ಲದ ಕಾರಣ, ಅವರ ಪತ್ನಿ ರೂಪಾ ಹೆಗಡೆ ಕರೆ ಸ್ವೀಕರಿಸಿದ್ದಾರೆ. ಆಗ ಅನಾಮಿಕ ವ್ಯಕ್ತಿಯೊಬ್ಬ ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿಕೊಂಡು ಇರಬೇಕು. ಮುಸ್ಲಿಂರ ಬಗ್ಗೆ ಮಾತನಾಡಿದರೆ ನಿಮ್ಮನ್ನು, ನಿಮ್ಮ ಕುಟುಂಬವನ್ನು ಬಿಡುವುದಿಲ್ಲ. ಜೀವ ತೆಗೆಯುತ್ತೇವೆ. ಅಯೋಧ್ಯೆ ನಿಮಗೆ ಬೇಕಾ? ಅದನ್ನು ಬಿಡುವುದಿಲ್ಲ. ನಿಮ್ಮ ಜೀವ ತೆಗೆಯುತ್ತೇವೆ ಎಂದು ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಅನಾಮಿಕ ವ್ಯಕ್ತಿ ಅವಾಚ್ಯ ಶಬ್ದದಿಂದ ಬೈಯತೊಡಗಿದಾಗ ರೂಪಾ ಹೆಗಡೆ ಅವರು ಫೋನ್ ಕಟ್ ಮಾಡಿದ್ದಾರೆ. ಈ ಹಿನ್ನೆಲೆ ಸಚಿವರ ಆಪ್ತ ಸಹಾಯಕ ಸುರೇಶ ಶೆಟ್ಟಿ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv