ರೆಸಾರ್ಟ್​ಗೆ ಹೊರಟ ಕಾಂಗ್ರೆಸ್ ಶಾಸಕರ ‘ಕೈ’ಗೆ ಸಿಗದ ಆನಂದ್​ ಸಿಂಗ್​

ಬೆಂಗಳೂರು: ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಿಂದ ರೆಸಾರ್ಟ್​ನತ್ತ ಕಾಂಗ್ರೆಸ್ ಶಾಸಕರು ಹೊರಟಿದ್ದಾರೆ. ಆದರೆ ವಿಜಯನಗರದ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್​ನ ಕೈಗೆ ಇನ್ನೂ ಸಿಕ್ಕಿಲ್ಲ. ಹಾಗಾಗಿ ಆನಂದ್​ ಸಿಂಗ್​ರನ್ನು ಹೊರತುಪಡಿಸಿ ಉಳಿದ ಶಾಸಕರು ಬಿಡದಿ ಸಮೀಪದ ಈಗಲ್​ಟನ್ ರೆಸಾರ್ಟ್​ಗೆ ಹೊರಟಿದ್ದಾರೆ. ಆನಂದ್ ಸಿಂಗ್​ರನ್ನು ಕರೆತರಲು ವಿಮಾನ ನಿಲ್ದಾಣಕ್ಕೆ ಜಮೀರ್ ತೆರಳಿದ್ದರೂ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ಈವರೆಗೂ ಆನಂದ್​ ಸಿಂಗ್​ ರೆಸಾರ್ಟ್​ ರಾಜಕಾರಣದ ಕೈಗೆ ಸಿಕ್ಕಿಲ್ಲ. ಡಿಕೆ ಶಿವಕುಮಾರ್​ ಸಹೋದರರಿಂದ ರೆಸಾರ್ಟ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv