‘ಅಮುಲ್​’ ಟ್ರಾಪಿಕಲ್​ನಲ್ಲಿ ಕ್ರೋಯೇಷಿಯಾ ಸ್ಟಾರ್​..!

ನವದೆಹಲಿ: ಭಾರತದ ಜನಪ್ರಿಯ ಡೈರಿ ಬ್ರ್ಯಾಂಡ್ ಅಮುಲ್ ತನ್ನ ಇತ್ತೀಚಿನ ಟ್ರಾಪಿಕಲ್​ನಲ್ಲಿ ಕ್ರೊಯೇಷಿಯಾದ ಫುಟ್​​ಬಾಲ್​ ತಂಡದ ನಾಯಕ ಲೂಕಾ ಮೊಡ್ರಿಕ್​ಗೆ ಗೌರವ ಸಲ್ಲಿಸಿದೆ. 2018ರ ಫಿಫಾ ವಿಶ್ವಕಪ್​ನಲ್ಲಿ ಕ್ರೊಯೇಷಿಯಾದ ಲೂಕಾ ಮೊಡ್ರಿಕ್ ಅದ್ಭುತ ಪ್ರದರ್ಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಪಡೆದಿದ್ದರು.

ಫೈನಲ್​ನಲ್ಲಿ ಸೋತಿದ್ದರೂ, ಟೂರ್ನಿಯುದ್ಧಕ್ಕೂ ಕ್ರೊಯೇಷಿಯಾ ನಾಯಕ ಮೊಡ್ರಿಕ್​ ಆಟಕ್ಕೆ ವಿಶ್ವವೇ ಮನಸೋತಿದೆ. ಎಲ್ಲರಂತೆ ಮೊಡ್ರಿಕ್​ ಆಟಕ್ಕೆ ಫಿದಾ ಆಗಿರುವ ಅಮುಲ್​ ಸಂಸ್ಥೆ ಅವರ ಟ್ರಾಪಿಕಲ್​ನಲ್ಲಿ ಮೊಡ್ರಿಕ್​ರ ಕಾರ್ಟೂನ್​ ಚಿತ್ರಿಸಿ ಗೌರವ ಸಲ್ಲಿಸಿದೆ. ಇದನ್ನು ತಮ್ಮ ಅಧಿಕೃತ ಟ್ವಿಟರ್​ನಲ್ಲಿ ಪ್ರಕಟಿಸಿದೆ. ಕ್ರೋಯೇಷಿಯನ್​ ಕ್ಯಾಪ್ಟನ್​ಗೆ ಗೋಲ್ಡನ್​ ಬಾಲ್​ ದಕ್ಕಿದೆ. ಫಿಫಾ 2018ರ ಬೆಸ್ಟ್​ ಪ್ಲೇಯರ್​ ಅಂತ ಕ್ಯಾಪ್ಷನ್​ ಕೊಟ್ಟಿದೆ​.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv