ಸಿನಿಮಾ ರಿ-ಎಂಟ್ರಿಗೆ ಐಸೂ ಅಮೂಲ್ಯ ಫೈನಲ್​​​ ತಯಾರಿ..!

ಚಿಕ್ಕ ವಯಸ್ಸಿಗೆ ಹೀರೋಯಿನ್​ ಆಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು, ಚಿಕ್ಕ ವಯಸ್ಸಿಗೆ ಸಿನಿಮಾ ಇಂಡಸ್ಟ್ರಿಗೆ ಅಲ್ಪ ವಿರಾಮ ಹಾಕಿ ಮದುವೆ ಆಗಿ ಸಂಸಾರ ಅನ್ನೋ ದೋಣಿ ಹತ್ಕೊಂಡು ಹೋಗಿದ್ದ ಅಮೂಲ್ಯ ಸಿನಿಮಾಕ್ಕೆ ಕಮ್​ ಬ್ಯಾಕ್​ ಮಾಡೋಕಂತಾ ಕಾಯ್ತಾ ಇದ್ರು ಅನ್ನೋದು ಹಳೇ ಸುದ್ದಿ. ಈ ನಡುವೆ ಅಮೂಲ್ಯ ಅವ್ರ ಮಾವ ಎಲೆಕ್ಷನ್​ಗೆ ನಿಂತ್ರು. ಎಲೆಕ್ಷನ್​ನಲ್ಲಿ ನಿಂತ ಮಾವನ ಪರ ಪ್ರಚಾರನೂ ಮಾಡಿದ್ರೂ. ಪ್ರಚಾರ ಮಾಡ್ತಾ ಮಾಡ್ತಾ ಪೊಲಿಟಿಕಲಿ ಕೂಡ ಗುರುತಿಸಿಕೊಂಡರೂ ಅಮೂಲ್ಯ. ಇಷ್ಟರ ನಡುವೆ ಪತಿ ಜಗದೀಶ್​ ಜೊತೆ ಜುಂ ಅಂತ ಫಾರಿನ್​ ಟ್ರಿಪ್​ ಕೂಡ ಮುಗಿಸಿಕೊಂಡು ಬಂದ್ರು. ಆದ್ರೆ ಅಭಿಮಾನಿಗಳು ಮಾತ್ರ ನಮ್ಮ ಮುದ್ದು ಐಸೂ ಅಮೂಲ್ಯ ಮದುವೆ ಆದ್ರೂ ಪರ್ವಾಗಿಲ್ಲ ಸಿನಿಮಾ ಮಾಡ್ಲಿ ಅಂತ ಬಯಸಿದ್ರು. ಅದರಂತೆ ಅಮೂಲ್ಯ ಸಿನಿಮಾ ಈಗ ಮಾಡ್ತೀನಿ, ಆಗ ಮಾಡ್ತೀನಿ ಅಂತಲೇ ಹೇಳಿಕೊಂಡು ಬಂದಿದ್ರು ಫೈನಲಿ ಈಗ ಅದಕ್ಕೆ ಕಾಲ ಹತ್ತಿರ ಬಂದಂತಿದೆ.

ಈ ನಡುವೆ ಮಾವನ ಮನೆಯ ಹಾರೈಕೆ, ಗಂಡನ ಮನೆಯ ಪ್ರೀತಿಯಿಂದ ತುಸು ದಪ್ಪವಾಗಿದ್ದ ಅಮೂಲ್ಯ ಸಿನಿಮಾ ರಿ-ಎಂಟ್ರಿ ಸಲುವಾಗಿ ವರ್ಕ್​ಔಟ್​ ಶುರು ಮಾಡಿದ್ದಾರೆ. ವರ್ಕೌಟ್​ ಮಾಡಿ ಮತ್ತೆ ಎಂದಿನ ಅಮೂಲ್ಯ ಆಗಿ ಬಣ್ಣ ಹಚ್ಚೋಕೆ ಎಲ್ಲಾ ರೀತಿಯ ಪ್ರಿಪರೇಷನ್​ ಆರಂಭಿಸಿದ್ದಾರೆ. ಆದ್ರೆ ಅಮೂಲ್ಯ ಕಮ್ ಬ್ಯಾಕ್​ನ ನಂತ್ರ ಯಾವ ಥರಹದ ಸಿನಿಮಾ ಮಾಡ್ತಾರೆ, ಮತ್ತೆ ಹೀರೋಯಿನ್ ಆಗ್ತಾರಾ..? ಅಥವಾ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ತಾರಾ ಅನ್ನೋದೇ ಸದ್ಯದ ಪ್ರಶ್ನೆ.