ತಾಯಿಯ ಮಹತ್ವವನ್ನು ಸಾರುವ ಚಿತ್ರ ‘ಅಮ್ಮ ಐ ಲವ್ ಯೂ’: ಕೆ.ಎಂ.ಚೈತನ್ಯ

ಶಿವಮೊಗ್ಗ: ದ್ವಾರಕೀಶ್ ಪ್ರೊಡಕ್ಷನ್ಸ್‌ನ 51 ನೇ ಚಿತ್ರ ‘ಅಮ್ಮ ಐ ಲವ್ ಯೂ’ ಇದೇ ಜೂನ್ 15 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗದಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಮಾತನಾಡಿದ ನಿರ್ದೇಶಕ ಕೆ.ಎಂ.ಚೈತನ್ಯ, ಇದೊಂದು ಕಮರ್ಷಿಯಲ್ ಹಾಗೂ ತಾಯಿಯ ಮಹತ್ವವನ್ನು ಸಾರುವ ಚಿತ್ರವಾಗಿದೆ ಅಂದರು. ಚಿತ್ರದ 5 ಹಾಡುಗಳಿಗೆ ಗುರು ಕಿರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಮ್ಮ ಐ ಲವ್​ಯು ಎಂಬ ಹಾಡನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಇದಕ್ಕೆ 3 ಲಕ್ಷಕ್ಕೂ ಹೆಚ್ಚು ಲೈಕ್ ಬಂದಿವೆ ಎಂದು ಹೇಳಿದರು. ಕನ್ನಡ ಚಿತ್ರರಂಗ ಮಾರುಕಟ್ಟೆಗೆ ಸೀಮಿತವಾಗಿದೆ. ಬೇರೆ ಭಾಷೆಗಳಂತೆ ಹೆಚ್ಚು ಹಣ ಖರ್ಚು ಮಾಡಲು ಆಗಲ್ಲ. ಹಾಗಾಗಿ ವಿದೇಶಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆ ಕಂಡುಕೊಳ್ಳಲಾಗುತ್ತಿದೆ ಎಂದರು. ಇದೇ ವೇಳೆ ನಟ ಚಿರಂಜೀವಿ ಸರ್ಜಾ ಮಾತನಾಡಿ, ನಾನು ಮತ್ತು ಚೈತನ್ಯ ಅವರು ಒಟ್ಟಾಗಿ ಕೆಲಸ ಮಾಡ್ತಿರುವ 2ನೇ ಸಿನಿಮಾ ಇದಾಗಿದೆ. ಅಲ್ಲದೇ ಡಿಜಿಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ತಿರುವ ಚಿತ್ರ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv