ಚನ್ನಪಟ್ಟಣದ ಗೊಂಬೆಗಳ ಮೋಡಿಗೆ ಶಾ ಫಿದಾ

ಚನ್ನಪಟ್ಟಣ: ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಣತೊಟ್ಟು ರಾಜ್ಯಾದ್ಯಾಂತ ಪ್ರವಾಸ ಕೈಗೊಂಡಿರುವ ಅಮಿತ್ ಶಾ ರಾಮನಗರ ಜಿಲ್ಲೆಯ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದರು.
ವಿಶ್ವವಿಖ್ಯಾತ ಚನ್ನಪಟ್ಟಣದ ಬೊಂಬೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದ ಅಮಿತ್ ಶಾ ಕರಕುಶಲಕರ್ಮಿಗಳ ಜೊತೆ ಸಂವಾದ ನಡೆಸಿದರು. ಕರಕುಶಲಕರ್ಮಿಗಳ ಕೈಚಳಕಕ್ಕೆ ಅವರು ಮೆಚ್ಚುಗೆ ಕೂಡಾ ವ್ಯಕ್ತಪಡಿಸಿದ್ರು. ಈ ವೇಳೆ ಶಾ ಜೊತೆಗೆ ಬಿ.ಎಸ್.ಯಡಯೂರಪ್ಪ, ಅನಂತ್​ಕುಮಾರ್, ಸಿ.ಟಿ.ರವಿ ಮತ್ತು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೀಶ್ವರ್ ಸಾಥ್​ ನೀಡಿದರು.

Leave a Reply

Your email address will not be published. Required fields are marked *