ಮೇಕೆ ಜತೆ ಬಿಗ್-ಬಿ ವಾಕಿಂಗ್..! ಏನಿದು ಸ್ಪೆಷಲ್..?

ನವದೆಹಲಿ: ಬಿಗ್​​ ಬಿ ಅಮಿತಾಭ್​​​​ ಬಚ್ಚನ್ ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಈಗ ಬಿಗ್‌-ಬಿ ಮೇಕೆಯ ಜತೆಗೆ ನಿಂತಿರುವ ಫೋಟೋ ಸಾಕಷ್ಟು ವೈರಲ್ ಆಗ್ತಿದೆ. ಈ ಫೋಟೋದಲ್ಲಿ ಬಿಗ್‌-ಬಿ, ಮೇಕೆಯ ಜತೆಗೆ ವಾಕಿಂಗ್ ಮಾಡ್ತಿದ್ದಾರೆ. ಟ್ವಿಟರ್‌ನಲ್ಲಿ ಈ ಫೋಟೋವನ್ನು ಶೇರ್ ಮಾಡಿರುವ ಅವರು, ‘ ಮೇಕೆಯ ಜತೆಗೆ ನನ್ನ ವಾಕ್’ ಎಂದು ಕ್ಯಾಪ್ಶನ್ ಹಾಕಿ ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಫೋಟೋದಲ್ಲಿ ಅಮಿತಾಭ್​​​​, ಬಿಳಿ ಬಣ್ಣದ ಕುರ್ತಾ, ಪಂಚೆ ಧರಿಸಿರುವುದು ಕಾಣಬಹುದು.

ಅಮಿತಾಭ್ ಎರಡು ಭಾಷೆಗಳಲ್ಲಿ ತಯಾರಾಗುತ್ತಿರುವ ‘ತೇರಾ ಯಾರ್ ಹೂ ಮೈ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತೆರೆ ಕಾಣಲಿರುವ ಈ ಚಿತ್ರದಲ್ಲಿ, ನಟ ಸೂರ್ಯ ಹಾಗೂ ರಮ್ಯಾ ಕೃಷ್ಣಾ ನಟಿಸುತ್ತಿದ್ದಾರೆ. ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅಮಿತಾಭ್​ ಅವರ ಚಿತ್ರಗಳ ಆಯ್ಕೆ ಕೂಡಾ ವಿಭಿನ್ನವಾಗೇ ಇರುತ್ತೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv