ಬಾಲಿವುಡ್ ಶೆಹನ್ ಶಾ ಅಮಿತಾಭ್​ ಕಟ್ಟಿದ ಟ್ಯಾಕ್ಸ್​ ಎಷ್ಟು.. ?

ಮುಂಬೈ: ಬಾಲಿವುಡ್ ಬಿಗ್​ ಬಿ ಅಮಿತಾಭ್​ ಬಚ್ಚನ್ ಪ್ರಸಕ್ತ ವರ್ಷ ಕಟ್ಟಿದ ಆದಾಯ ತೆರಿಗೆಯ ಮೊತ್ತವನ್ನ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ . 2018-19ರ ಸಾಲಿನಲ್ಲಿ ಸುಮಾರು 70 ಕೋಟಿ ಆದಾಯ ತೆರಿಗೆಯನ್ನು ಅಮಿತಾಭ್ ತೆರಿಗೆ ಇಲಾಖೆಗೆ ಕಟ್ಟಿದ್ದಾರೆ. ಕಳೆದ ವರ್ಷವಷ್ಟೇ ಅಮಿತಾಭ್​ ಬಚ್ಚನ್ ಮುಜಾಫರ್​​ಪುರ್​ನ 2084 ರೈತರ ಸಾಲಮನ್ನಾಗೆ ಹಣದ ನೆರವು ನೀಡಿ ಮಾದರಿಯಾಗಿದ್ದರು . ಅಲ್ಲದೇ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನೂ ನೀಡಿದ್ದರು. ಇದೆಲ್ಲದರ ಮಧ್ಯೆಯೂ ಅಮಿತಾಭ್​ ಬಚ್ಚನ್ 70 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದಾರೆ.

ಇನ್ನು, ಕೆಲ ದಿನಗಳ ಹಿಂದಷ್ಟೇ ತೆರೆ ಕಂಡಿರುವ ಅಮಿತಾಭ್​ ಬಚ್ಚನ್ ಹಾಗೂ ತಾಪ್ಸಿ ಪನ್ನು ಅಭಿನಯದ ಬದ್ಲಾ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ನೂರು ಕೋಟಿ ರೂಪಾಯಿ ಕ್ಲಬ್​ ಕೂಡ ಸೇರಿದೆ. ಅಲ್ಲದೇ, ಧರ್ಮ ಪ್ರೊಡಕ್ಷನ್​ನಲ್ಲಿ ಸಿದ್ಧವಾಗ್ತಿರೋ ಬ್ರಹ್ಮಾಸ್ತ್ರ ಸಿನಿಮಾದಲ್ಲೂ ಕೂಡ ಅಮಿತಾಭ್​ ಬಚ್ಚನ್ ನಟಿಸುತ್ತಿದ್ದು ಈ ವರ್ಷದ ಕ್ರಿಸ್​ಮಸ್​ಗೆ ಚಿತ್ರ ತೆರೆಗೆ ಬರಲಿದೆ. ತಮಿಳು ಸಿನಿಮಾವೊಂದರಲ್ಲೂ ಬಿಗ್​ ಬಿ ನಟಿಸುತ್ತಾರೆಂಬ ಸುದ್ದಿ ಹರಿದಾಡ್ತಿದೆ.