ಕಲಬೆರಕೆಯ ಮಹಾ ಘಟಬಂಧನ್ : ಅಮಿತ್ ಶಾ

ದಾವಣಗೆರೆ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಲಿದ್ದಾರೆ.ಮಹಾಘಟಬಂಧನ್​ಗೆ ಯಾರು ನಾಯಕರು ಎಂದು ಕೇಳಿದರೆ ಯಾವ ಉತ್ತರವೂ ಬರುತ್ತಿಲ್ಲ. ಇದು ಅತಿ ಕಲಬೆರಕೆಯ ಮಹಾಘಟಬಂಧನ್ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದರು.

ಹೊನ್ನಾಳಿ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ ಪರ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಈ ಘಟಬಂಧನ್ ಅಧಿಕಾರಕ್ಕೆ ಬಂದ್ರೆ ಪ್ರತಿ ದಿನ ಒಬ್ಬೊಬ್ರು ಪ್ರಧಾನಮಂತ್ರಿ ಆಗಲಿದ್ದಾರೆ. ಅವರು ನಾಯಕರಿಲ್ಲದೇ ದೇಶವನ್ನು ಹೇಗೆ ನಡೆಸುತ್ತಾರೆ? ಸೋನಿಯಾ ಮತ್ತು ರಾಹುಲ್ ಗಾಂಧಿಯಿಂದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದ್ರೆ ಜನರು ಆಯ್ಕೆ ಮಾಡಿದ್ದನ್ನು ಮರೆತು ಮತದಾರಿಗೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿ ಬೇಕಾಗಿಲ್ಲ. ಅಧಿಕಾರಕ್ಕೆ ಬಂದು ಎಟಿಎಂ ಮೂಲಕ ಹಣ ಗಳಿಸಲಿಕ್ಕೆ ಕೆಲಸ ಮಾಡುತ್ತಿದೆ ಎಂದು ಅಮಿತ್ ಶಾ ಆರೋಪಿಸಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv