ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುಳ್ಳುಗಾರ: ಟಿಎಂಸಿ

ಕೋಲ್ಕತ್ತಾ: ನಿನ್ನೆ ನಡೆದ ಘರ್ಷಣೆಯ ವಿಡಿಯೋದಲ್ಲಿ ಬಿಜೆಪಿ ಏನು ಮಾಡಿದೆ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ. ತಾವು ಸುಳ್ಳುಗಾರ ಅನ್ನೋದನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಾಬೀತು ಮಾಡಿದ್ದಾರೆ ಅಂತಾ ಟಿಎಂಸಿ ಮುಖಂಡ ಡೆರೇಕ್ ಓಬ್ರಿಯಾನ್ ಆರೋಪಿಸಿದ್ದಾರೆ.

ನಿನ್ನೆ ಕೊಲ್ಕತ್ತಾದಲ್ಲಿ ರೋಡ್ ಶೋ ವೇಳೆ ಗುಂಪುಘರ್ಷಣೆ ನಡೆದ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಸುದ್ದಿಗೋಷ್ಠಿ ನಡೆಸಿದ ಟಿಎಂಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತು.

ಈ ವೇಳೆ ಮಾತನಾಡಿದ ತೃಣಮೂಲ ಕಾಂಗ್ರೆಸ್​ ರಾಜ್ಯಸಭಾ ಸದಸ್ಯ ಡೆರೇಕ್ ಓಬ್ರಿಯಾನ್ ಸೆಂಟ್ರಲ್ ಫೋರ್ಸ್​ ವಿರುದ್ಧ ನಮಗೆ ವೈಯಕ್ತಿಕವಾಗಿ ಏನೂ ಇಲ್ಲ. ನಮ್ಮ ಬಳಿ ಎರಡು ಫೋಟೋಗಳು ಇವೆ. ಅದು ಚುನಾವಣೆಗೆ ಸಂಬಂಧಿಸಿದ್ದಾಗಿದೆ. ಪಶ್ಚಿಮ ಬಂಗಾಳದಲ್ಲಿ ಕೇಂದ್ರೀಯ ಪಡೆಗಳು ಬಿಜೆಪಿ ಹತೋಟಿಯಲ್ಲಿವೆ. ಇದನ್ನ ಬಹಿರಂಗ ಗೊಳಿಸುವ ಸಂಬಂಧ ಎರಡು ಚಿತ್ರಗಳು ನಮ್ಮಲ್ಲಿವೆ ಎಂದರು.

ನಿನ್ನೆ ನಡೆದ ಘರ್ಷಣೆಗಳಿಂದಾಗಿ ನಿಜಕ್ಕೂ ನಮಗೆ ಆಘಾತ ಆಗಿದೆ. ಚುನಾವಣೆ ಸಂದರ್ಭದಲ್ಲಿ ಯಾರಾದರೂ ಬಂದು ಮೆರವಣಿಗೆ ಮಾಡಬಹುದು. ಆದ್ರೆ ಹೊರಗಿನರವರು ಬಂದು ಮಾಡಿದ್ದೇನು..? ತೇಜೇಂದ್ರ ಬಗ್ಗಾ ಯಾರು? ಅವನು ಯಾರು? ಸದ್ಯ  ಆತನನ್ನ ಅರೆಸ್ಟ್​ ಮಾಡಲಾಗಿದೆ. ದೆಹಲಿಯಲ್ಲಿ ಯಾರೋ ಒಬ್ಬರಿಗೆ ಕಪಾಳಕ್ಕೆ ಹೊಡೆತ ವ್ಯಕ್ತಿ ಆತನಲ್ಲವೇ? ನೀವು ಹೊರಗಿನಿಂದ ಗೂಂಡಾಗಳನ್ನ ಕರೆಸಿಕೊಂಡಿದ್ದೀರಿ ಎಂದು ಆರೋಪಿಸಿದರು.

ನಮ್ಮಲ್ಲಿರುವ ವಿಡಿಯೋಗಳನ್ನ ಚುನಾವಣಾ ಆಯೋಗಕ್ಕೆ ನೀಡಿ ದೂರು ದಾಖಲಿಸಿಕೊಳ್ಳುತ್ತೇವೆ. ಗಲಾಟೆ ಪ್ರಕರಣ ಸಂಬಂಧ ನಮಗೆ ಸಿಕ್ಕಿರುವ ವಿಡಿಯೋಗಳಲ್ಲಿ ಯಾರು ಗಲಾಟೆ ಮಾಡಿದ್ದು ಅನ್ನೋದಕ್ಕೆ ಸಾಕ್ಷಿ ಸಿಕ್ಕಿದೆ ಅದನ್ನ ನೀಡುತ್ತೇವೆ ಚುನಾವಣಾ ಆಯೋಗಕ್ಕೆ ನೀಡುತ್ತೇವೆ ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv