ಡಿಕೆಶಿಗೆ ಶಾ ಕರೆ ಮಾಡಿದ್ದರು ..! ಎಂಎಲ್​ಸಿ ಲಿಂಗಪ್ಪ ಹೊಸ ಬಾಂಬ್

ರಾಮನಗರ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಎಂಎಲ್​ಸಿ ಸಿ.ಎಂ. ಲಿಂಗಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಗುಜರಾತ್ ಶಾಸಕರು ಇಲ್ಲಿಗೆ ಬಂದಿದ್ದಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಡಿ.ಕೆ. ಶಿವಕುಮಾರ್​ಗೆ ದೂರವಾಣಿ ಕರೆ ಮಾಡಿದ್ದರು. ಈ ವೇಳೆ 38 ಜನ ಶಾಸಕರನ್ನ ನೀವೇ ಇಟ್ಕೊಳ್ಳಿ, 4 ಜನರನ್ನ ನನಗೆ ಕೊಡಿ ಎಂದಿದ್ದರು. ಪ್ರತಿಫಲವಾಗಿ, ನಾನು ನಿಮಗೆ ಬಹಳ ದೊಡ್ಡ ಸಹಾಯ ಮಾಡ್ತೀನಿ ಅಂದಿದ್ದರು. ಆದರೆ ಡಿ.ಕೆ. ಶಿವಕುಮಾರ್ ಆ ಆಮಿಷಕ್ಕೆ ಒಪ್ಪಲಿಲ್ಲ. ನಾನು ಪಕ್ಕಾ ಕಾಂಗ್ರೆಸ್ಸಿಗ. ನನ್ನ ದೇಹದಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಈ ವಿಚಾರದಲ್ಲಿ ಅಯಾಮ್​ ಸಾರಿ ಎಂದು ಅಮಿತ್ ಶಾಗೆ ಹೇಳಿದ್ದರು. ದೂರವಾಣಿ ಕರೆ ಸಂದರ್ಭದಲ್ಲಿ ನಾನೇ ಶಿವಕುಮಾರ್ ಜೊತೆಯಲ್ಲಿದ್ದೆ ಎಂದು ಲಿಂಗಪ್ಪ ಹೊಸ ಬಾಂಬ್ ಸ್ಫೋಟಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv