ಮಾನವೀಯತೆ ಮೆರೆದ ಆ್ಯಂಬುಲೆನ್ಸ್​ ಚಾಲಕ

ಚಿಕ್ಕಮಗಳೂರು: ಅಪಘಾತದಲ್ಲಿ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದವರನ್ನ ರಕ್ಷಿಸಿದ ಚಿಕ್ಕಮಗಳೂರಿನ ಖಾಸಗಿ ಆ್ಯಂಬುಲೆನ್ಸ್​ ಚಾಲಕ ಮಾನವೀಯತೆ ಮೆರೆದಿದ್ದಾನೆ. ಚಿಕ್ಕಮಗಳೂರಿನಿಂದ ಹಾಸನಕ್ಕೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು ಗಾಯಾಳುಗಳನ್ನು ಕೂಡಲೇ ಹಾಸನದ ಜಿಲ್ಲಾಸ್ಪತ್ರಗೆ ಸೇರಿಸಿದ್ದಾನೆ. ಖಾಸಗೀ ಆ್ಯಂಬುಲೆನ್ಸ್​ ಆದ್ರು ಬಿಡಿಗಾಸು ಪಡೆಯದೆ ಅವರನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಆ್ಯಂಬುಲೆನ್ಸ್​ ಚಾಲಕನ ನಿಸ್ವಾರ್ಥ ಸೇವೆಗೆ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv