ಬಸ್​​ ಅಪಘಾತ: ಟ್ರಾಫಿಕ್​ನಲ್ಲಿ ಸಿಲುಕಿದ ‘108’ ವಾಹನ

ಕಲಬುರ್ಗಿ: ಬಸ್ ಅಪಘಾತದಿಂದಾಗಿ 108 ಌಂಬುಲೆನ್ಸ್​ ಅರ್ಧ ಗಂಟೆಗೂ ಅಧಿಕ ಕಾಲ ಟ್ರಾಫಿಕ್​ನಲ್ಲಿ ಸಿಲುಕಿದ ಘಟನೆ ಜಿಲ್ಲೆಯ ಮರಗುತ್ತಿ ಕ್ರಾಸ್ ಬಳಿ ನಡೆದಿದೆ. ಎರಡು ಖಾಸಗಿ ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ರಸ್ತೆಯಲ್ಲಿ ಟ್ರಾಫಿಕ್​ ಜಾಮ್ ಉಂಟಾಗಿತ್ತು.

ಬೆಂಗಳೂರಿನಿಂದ ಬೀದರ್‌ಗೆ ತೆರಳುತ್ತಿದ್ದ ಆರೆಂಜ್ ಟ್ರಾವೆಲ್ಸ್ ಬಸ್ ಹಾಗೂ ಮುಂಬೈನಿಂದ ಕಲಬುರ್ಗಿಗೆ ಬರುತ್ತಿದ್ದ ಕೋಹಿನೂರ್ ಟ್ರಾವೆಲ್ಸ್ ಬಸ್ಸ್ ಡಿಕ್ಕಿಯಾದ ಪರಿಣಾಮ ಎರಡು ಬಸ್​ಗಳು ನಜ್ಜು ಗುಜ್ಜಾಗಿದ್ದವು. ಅಪಘಾತದಲ್ಲಿ ಓರ್ವ ಚಾಲಕ ಸೇರಿದಂತೆ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಌಂಬುಲೆನ್ಸ್​ ಟ್ರಾಫಿಕ್ ಜಾಮ್​ ಸಿಲುಕಿಕೊಂಡು ಚಲಿಸಲಾಗದೇ ಪರದಾಡಿತು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv