ಌಂಬ್ಯುಲೆನ್ಸ್​ನಲ್ಲಿದ್ದ ಸಿಲಿಂಡರ್​ ಬ್ಲಾಸ್ಟ್

ಮಂಗಳೂರು: ನಗರದಲ್ಲಿ 108 ಌಂಬ್ಯುಲೆನ್ಸ್​ನಲ್ಲಿದ್ದ ಸಿಲಿಂಡರ್​ ಬ್ಲಾಸ್ಟ್​ ಆಗಿದೆ. ಅದೃಷ್ಟವಶಾತ್​ ಯಾವುದೇ ಅನಾಹುತ ಸಂಭವಿಸಿಲ್ಲ. ಮಂಗಳೂರಿನ ವಳಚ್ಚಿಲ್​ನಲ್ಲಿ ಌಂಬ್ಯುಲೆನ್ಸ್​ ಸಾಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸಿಲಿಂಡರ್​ ಬ್ಲ್ಯಾಸ್ಟ್​ ಆಗಿದೆ.

ವಾಹನದ ಹಿಂಬದಿ ಯಾರೂ ಇಲ್ಲದಿದ್ದ ಕಾರಣ ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ. ಇಂದು ಮಧ್ಯಾಹ್ನದ ವೇಳೆ ಘಟನೆ ನಡೆದಿದ್ದು, ಕಾರಣ ಏನು ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:contact@firstnews.tv