ಅಂಬಿ ಹುಟ್ಟುಹಬ್ಬಕ್ಕೆ ಕಡಲೆಪುರಿ-ಬತಾಸು ಹಾರ ತಂದ ಅಭಿಮಾನಿ

ಬೆಂಗಳೂರು: ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಹುಟ್ಟು ಹಬ್ಬ. ಈ ಹಿನ್ನೆಲೆ ಕಂಠೀರವ ಸ್ಟೂಡಿಯೋದಲ್ಲಿರೋ ಅಂಬಿ ಸಮಾಧಿಗೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿದೆ. ಅಂಬರೀಷ್​ ಕುಟುಂಬಕ್ಕೆ ಅಂಬಿ ಇಲ್ಲದ ಮೊದಲ ಹುಟ್ಟುಹಬ್ಬವಿದು. ಪತ್ನಿ ಸುಮಲತಾ ಅಂಬರೀಶ್ ಹಾಗೂ ಮಗ ಅಭಿಷೇಕ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಅಂಬಿ  ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಪೂಜೆ ಬಳಿಕ  ಸುಮಲತಾ ಹಾಗೂ ಅಭಿಷೇಕ್ ಮಂಡ್ಯಕ್ಕೆ ತೆರಳಲಿದ್ದಾರೆ. ಮಂಡ್ಯದಲ್ಲಿ ಅಂಬಿ ಜಯಂತೋತ್ಸವ ನಡೆಯಲಿದೆ. ಸಂಸದರಾಗಿ ಆಯ್ಕೆ ಆದ ಬಳಿಕ ಮಂಡ್ಯ ಜನರಿಗೆ ಇಂದು ಸಮಲತಾ ಅಂಬರೀಶ್ ಧನ್ಯವಾದ ಸಲ್ಲಿಸಲಿದ್ದಾರೆ. ಇನ್ನು ಅಂಬಿ ಹುಟ್ಟುಹಬ್ಬದ ಹಿನ್ನೆಲೆ ಸಮಾಧಿಗೆ ಸಾವಿರಾರು ಅಭಿಮಾನಿಗಳು ಬರೋ ನಿರೀಕ್ಷೆ ಇದೆ. ಅಂಬಿಯ ಅಪ್ಪಟ ಅಭಿಮಾನಿಯೊಬ್ಬರು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಆಗಮಿಸಿದ್ದಾರೆ. ಗುಬ್ಬಿ ಮೂಲದ ಸುಮಿತ್ರಾ ಭಾಯಿ ಅಂಬಿಗಾಗಿ ಕಡಲೆಪುರಿ – ಬತಾಸು ಹಾರ ತಂದಿದ್ದಾರೆ. ಒಂದು ವಾರದ ಸಮಯ ತೆಗೆದುಕೊಂಡು ಅವರು ಈ ಹಾರ ತಯಾರಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv