ಸಮಾಧಿ ಮುಂದೆ ಲಗ್ನಪತ್ರಿಕೆಯಿಟ್ಟು ಪೂಜೆ ಮಾಡಿದ ಅಂಬಿ ಅಭಿಮಾನಿ!

ಇವತ್ತು ಕಲಿಯುಗ ಕರ್ಣ, ರೆಬಲ್ ಸ್ಟಾರ್ ಅಂಬರೀಶ್ 67 ರ ಹುಟ್ಟುಹಬ್ಬದ ಸಂಭ್ರಮ. ಮಂಡ್ಯದ ಗಂಡನ್ನು ನೆನೆದು ಸಾವಿರಾರು ಅಭಿಮಾನಿಗಳು, ಕಲಾವಿದರು ಅಂಬಿ ಸ್ಮಾರಕದ ಎದುರು ನಮನ ಸಲ್ಲಿಸುತ್ತಿದ್ದಾರೆ. ಇನ್ನೊಂದೆಡೆ ಅಂಬಿಯ ಅಪ್ಪಟ ಅಭಿಮಾನಿಯಾಗಿರೋ ಮಂಡ್ಯದ ಮಳವಳ್ಳಿ ಮೂಲದ ನಾಗೇಶ್ ಎನ್ನುವವರು ಸ್ಮಾರಕದ ಮುಂದೆ ಮದುವೆ ಆಹ್ವಾನ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನಲವತ್ತು ವರ್ಷಗಳಿಂದ ಅಂಬರಿಶ್ ಅಭಿಮಾನಿ ನಾನು. ಅವರು ಅಂದ್ರೆ ನನಗೆ ಪಂಚಪ್ರಾಣ, ಅವರ ಪ್ರತಿ ಹುಟ್ಟುಹಬ್ಬಕ್ಕೂ ಬಂದು ಶುಭಹಾರೈಸುತ್ತಿದೆ. ಅದ್ರೆ ಈ ಬಾರಿ ಅವರಿಲ್ಲ ಅಂತಾ ಬೇಸರವಿದೆ. ಮದುವೆಗೆ ಅಂಬಿಯಣ್ಣನನ್ನು ಆಹ್ವಾನಿಸುವ ಆಸೆಯಿತ್ತು. ಅವರಿಲ್ಲದ ಕಾರಣ ಅವರ ಸಮಾಧಿ ಬಳಿ ಲಗ್ನಪತ್ರಿಕೆ ಇಟ್ಟು ಆಶೀರ್ವಾದ ಪಡೆದಿದ್ದೇನೆ ಅಂತಾ ಭಾವುಕರಾಗಿ ಹೇಳಿದರು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv