ಅಮರನಾಥ ಯಾತ್ರೆಗೆ ತೆರಳಿದ್ದ 53 ಯಾತ್ರಾರ್ಥಿಗಳು ಸುರಕ್ಷಿತ

ಹುಬ್ಬಳ್ಳಿ: ಅಮರನಾಥನ ದರ್ಶನಕ್ಕೆ ತೆರಳಿದ್ದ ಹುಬ್ಬಳ್ಳಿಯ 59 ಯಾತ್ರಾರ್ಥಿಗಳು ಈಗ ಪಹಲ್ಗಾಮ್​​ ವಸತಿಗೃಹ ತಲುಪುವ ಮೂಲಕ ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ. ಹುಬ್ಬಳ್ಳಿಯ ನವನಗರ ನಿವಾಸಿ ರಾಘವೇಂದ್ರ ಶಿರಹಟ್ಟಿ ದೂರವಾಣಿ ಮೂಲಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಅಮರನಾಥ ಪ್ರದೇಶದಲ್ಲಿ ‌ಉಂಟಾಗಿದ್ದ ಭಾರಿ ಮಳೆ ಹಾಗೂ ಭೂ ಕುಸಿತದಿಂದ 115 ಜನರು ಬೇರೆ ಬೇರೆ ಗುಂಪುಗಳಾಗಿ ಚದುರಿ ಹೋಗಿದ್ದರು. ಇದರಲ್ಲಿ 53 ಜನರ ಒಂದು ಗುಂಪು ಮೂರು‌ ದಿನಗಳಿಂದ ಗುಹೆ ಒಂದರಲ್ಲಿ ಅನ್ನ, ನೀರು ಇಲ್ಲದೇ ಪರದಾಡಿದ್ದರು. ಈಗ ಯಾತ್ರಿಕರೆಲ್ಲರೂ ಪಹಲ್ಗಾಮ್​​ ವಸತಗೃಹ ತಲುಪುವ ಮೂಲಕ ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ.
ಸುರಕ್ಷಾ ಖಾಸಗಿ ಟ್ರಾವೆಲ್ಸ್ ಮೂಲಕ ಉತ್ತರ ಕರ್ನಾಟಕದಿಂದ 115 ಜನ ಅಮರನಾಥ ಯಾತ್ರೆ ಕೈಗೊಂಡಿದ್ದರು. ದರ್ಶನ ಮುಗಿಸಿ ವಾಪಾಸ್ ಆಗುವ ವೇಳೆ ಅಪಾಯಕ್ಕೆ ಸಿಲುಕಿಕೊಂಡಿದ್ದರು. ಅಪಾಯದಿಂದ ಪಾರಾದ ಯಾತ್ರಾರ್ಥಿಗಳು ಸದ್ಯ ಧಾರವಾಡ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.com