ಸುಮ್ಮನೆ ಕಾಡುತ್ತೆ ಅಮರ್‌ ಚಿತ್ರದ 2ನೇ ಹಾಡು!

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್‌ ಚೊಚ್ಚಲ ನಟನೆಯ ಅಮರ್ ಚಿತ್ರ ಈಗಾಗ್ಲೇ ಹಾಡುಗಳಿಂದಲೇ ಸೆನ್ಸೇಷನ್ ಹುಟ್ಟಿಸಿದೆ. ಈ ಚಿತ್ರದ ಸುಮ್ಮನೆ ಹೀಗೆ ನಿನ್ನನೆ ಅನ್ನೋ ಲಿರಿಕಲ್ ವಿಡಿಯೋ ಇದೀಗ ಯುಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದು, ಸಖತ್ ಮೆಲೋಡಿಯಾಗಿದೆ. ಕೇಳ್ತಿದ್ದಂತೆ ಮನಸೋಲೋದು ಗ್ಯಾರಂಟಿ.

ಸುಮ್ಮನೇ ಹೀಗೆ ನಿನ್ನನೇ..!
ಲಿರಿಕಲ್ ವಿಡಿಯೋದಲ್ಲಿ ಸಿನಿಮಾ ಮೇಕಿಂಗ್‌ ಝಲಕ್ ತೋರಿಸಿದ್ದು ಹಚ್ಚ ಹಸಿರು, ಹರಿಯೋ ನೀರು, ಮಂಜಿನ ನಡುವೆ ಈ ಜೋಡಿಹಕ್ಕಿ ಅದ್ಭುತವಾದ ಲೊಕೇಶನ್‌ಗಳು ಕಣ್ಣಿಗೆ ಹಬ್ಬ ನೀಡುವಂತಿದೆ. ಮನಸ್ಸಿಗೆ ಮುದ ನೀಡುವಂಥಾ ದೃಶ್ಯಗಳ ತುಣುಕುಗಳೇ ಚಿತ್ರ ರಿಲೀಸ್‌ ಆಗೋ ಕಾತರ ಹೆಚ್ಚಿಸುವಂತಿದೆ. ಹಾಡಿನ ಆರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಲಾಗಿದೆ. ವಿಶೇಷ ಅಂದ್ರೆ ಖ್ಯಾತ ಗಾಯಕ, ಗಾಯಕಿ ಸೋನು ನಿಗಮ್ ಹಾಗೂ ಶ್ರೇಯಾ ಘೋಷಾಲ್ ಕಾಂಬಿನೇಶನ್ ಹಾಡಿನಲ್ಲಿ ಮತ್ತೆ ಇಲ್ಲಿ ಮೋಡಿ ಮಾಡಿದೆ. ಈ ಹಾಡಿಗೂ ಕವಿರಾಜ್ ಸಾಹಿತ್ಯ, ಅರ್ಜುನ್ ಜನ್ಯಾ ಮ್ಯೂಸಿಕ್ ಮ್ಯಾಜಿಕ್ ಮಾಡಿದೆ.

ಇನ್ನು, ಚಿತ್ರ ರಿಲೀಸ್‌ಗೂ ಮುನ್ನವೇ ಮ್ಯೂಸಿಕಲ್ ಹಿಟ್ ಆಗೋ ಎಲ್ಲಾ ಸೂಚನೆಗಳು ಸಿಕ್ಕಿವೆ. ಚಿತ್ರದ ಮೊದಲ ಹಾಡು ಮರೆತು ಹೋಯಿತೆ ನನ್ನೆಯ ಹಾಜರಿ.. ಅನ್ನೋ ಸುಮಧುರ ಹಾಡು ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿದೆ. ಈಗ ರಿಲೀಸ್ ಆಗಿರೋ ಸುಮ್ಮನೆ ಹೀಗೆ ಹಾಡು ಕೂಡ ಮತ್ತೆ ಮತ್ತೆ ಗುನುಗುವವಷ್ಟು ಇಂಪಾಗಿದೆ. ನಾಗಶೇಖರ್ ನಿರ್ದೇಶನದ ಅಮರ್‌ನಲ್ಲಿ ಅಭಿಗೆ ತಾನ್ಯ ಹೂಪ್ ಹೀರೋಯಿನ್ ಆಗಿದ್ದು, ಈ ಜೋಡಿ ತೆರೆ ಮೇಲೆ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ. ಅಭಿ ಬೈಕ್ ರೇಸರ್‌ ಆಗಿ ಕಾಣಿಸಿಕೊಂಡಿದ್ದು, ಬೈಕ್ ರೇಸ್ ಜೊತೆಗೆ ನಡೆಯುವ ಕ್ಯೂಟ್ ಲವ್ ಸ್ಟೋರಿ ಚಿತ್ರದಲ್ಲಿದೆ. ಅಂಬರೀಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಮುಂದಿನ ತಿಂಗಳು 31ರಂದು ಸಿನಿಮಾ ರಿಲೀಸ್ ಆಗಲಿದೆ.