ಫಲಿತಾಂಶ ಬಂದಾಗ ದಿಗ್ಭ್ರಮೆ ಆಯ್ತು! ನನ್ನ ಅದೃಷ್ಟ ಬದಾಮಿ ಕೈ ಹಿಡಿಯಿತು -ಸಿದ್ದರಾಮಯ್ಯ

ದಾವಣಗೆರೆ: ಜನ ಯಾವುದಕ್ಕೆ ವೋಟ್ ಕೊಡ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಜನ ನನ್ನನ್ನ ಚಾಮುಂಡಿ ಕ್ಷೇತ್ರದಲ್ಲಿ ಸೋಲಿಸಿದ್ರು. ನನ್ನ ಅದೃಷ್ಟ ಬದಾಮಿ ಕೈ ಹಿಡಿಯಿತು. ಚುಣಾವಣೆಯ ಮುಂಚೆ ಎಲ್ಲಾ ಚೆನ್ನಾಗಿತ್ತು. ಆದ್ರೆ ಚುನಾವಣೆ ಫಲಿತಾಂಶ ಬಂದಾಗ ದಿಗ್ಭ್ರಮೆ ಆಯಿತು ಅಂತಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿ ಕ್ಷೇತ್ರದಲ್ಲಿ ತಮಗಾದ ಸೋಲಿನ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ರವೀಂದ್ರ ಬಹುಕಾಲ ಬಾಳಿ ಬದುಕಬೇಕಿತ್ತು
ಎಂ.ಪಿ ರವೀಂದ್ರ ಬಹುಕಾಲ ಬಾಳಿ ಬದುಕಬೇಕಾಗಿತ್ತು. ಆದ್ರೆ ನಮ್ಮನ್ನು ಬಿಟ್ಟು ಅಗಲಿದ್ದಾರೆ  ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಎಂ.ಪಿ. ರವೀಂದ್ರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ರವೀಂದ್ರ ಇನ್ನೂ ಇದ್ದಿದ್ರೆ ಅವರ ತಂದೆ ಎಂ.ಪಿ. ಪ್ರಕಾಶ್​ ಸರಿಸಮನಾಗಿ ಬೆಳೆಯುತ್ತಿದ್ರು. ಹರಪನಹಳ್ಳಿಯನ್ನು 371 J ಗೆ ಸೇರಿಸಲು ಒತ್ತಾಯಿಸಿದ್ರು. ದಾವಣಗೆರೆ ಜಿಲ್ಲೆಯಿಂದ ಹರಪನಹಳ್ಳಿ ಬಿಡುಗಡೆಯಾಗುತ್ತೆ. ಬಿಡುಗಡೆ ಹೊಂದಿ ಬಳ್ಳಾರಿಗೆ ಸೇರ್ಪಡೆಯಾಗತ್ತೆ. ಇನ್ನು ಅಧಿಕೃತವಾಗಿ ಆದೇಶ ಹೊರಡಿಸಬೇಕಾಗಿದೆ ಅಷ್ಟೇ. ಉಪಕಂದಾಯ ವಿಭಾಗ ಕೂಡ ಹರಪನಹಳ್ಳಿಯಲ್ಲಿಯೇ ಮುಂದುವರೆಸಲಾಗುವುದು. ಇದಕ್ಕೆ ಸರಕಾರ ಆದೇಶ ಕೂಡ ಮಾಡಿದೆ ಎಂದು ಅವರು ತಿಳಿಸಿದರು.

ರಾಮನಗರದ ನಾಗರಾಜ್ ಉಲ್ಟಾ ಹೊಡೆದಿದ್ದಕ್ಕೆ ಕೆಎಂಎಫ್ ಅಧ್ಯಕ್ಷ ಸ್ಥಾನ ಕೈತಪ್ಪಿತ್ತು
ಇನ್ನು ಎಂಪಿ ರವೀಂದ್ರ ಕೆಎಂಎಫ್ ಅಧ್ಯಕ್ಷ ಸ್ಥಾನ  ಬಯಸಿದ್ದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ರವೀಂದ್ರ ಸಚಿವ ಆಗಬೇಕೆಂದಿರಲಿಲ್ಲ, ಆದ್ರೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಆಸೆ ಪಟ್ಟಿದ್ದ. ಅದನ್ನು ನಮ್ಮ ಕೈಲಿ ಮಾಡೋಕೆ ಆಗ್ಲಿಲ್ಲ. ಇದರಿಂದ ಆತ ಬೇಜಾರಾಗಿದ್ದ. ಈ ವಿಚಾರದಲ್ಲಿ ರಾಮನಗರದ ನಾಗರಾಜ್ ಉಲ್ಟಾ ಹೊಡೆದ. ನಾಗರಾಜ್ ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತಂದಿದ್ದ. ಹೀಗಾಗಿ ರವೀಂದ್ರಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv