ಮೊದಲ ಐಪಿಎಲ್ ಪಂದ್ಯದಲ್ಲೇ ಜೋಸೆಫ್ ಅದ್ಭುತ ದಾಖಲೆ..!

ವೆಸ್ಟ್​ ಇಂಡೀಸ್​ ಯುವ ವೇಗಿ ಅಲ್ಜರಿ ಜೋಸೆಫ್ ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲೇ ದಾಖಲೆ ಬರೆದಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಜೋಸೆಫ್​ ನಿನ್ನೆ ಸನ್​ರೈಸರ್ಸ್ ವಿರುದ್ಧ ತಮ್ಮ ಅದ್ಭುತ ಬೌಲಿಂಗ್ ಮೂಲಕ ಮಿಂಚಿದ್ರು. 4  ಓವರ್​ ಕೂಡ ಪೂರ್ಣ ಗೊಳಿಸಿದ ಜೋಸೆಫ್, 1 ಮೇಡನ್ ಸಹಿತ ಕೇವಲ 12 ರನ್​ ನೀಡಿ ಸನ್​ರೈಸರ್ಸ್ ಪ್ರಮುಖ 6 ವಿಕೆಟ್ ಪಡೆದ್ರು. ಈ ಮೂಲಕ ಮುಂಬೈ ಇಂಡಿಯನ್ಸ್ ಪಾಲಿನ ಹೀರೋ ಆದ್ರು. ಅಲ್ಲದೇ ಐಪಿಎಲ್​ನಲ್ಲಿ ಬೆಸ್ಟ್ ಬೌಲಿಂಗ್ ಫಿಗರ್​ ಹೊಂದಿದ್ದ ಪಾಕಿಸ್ತಾನದ ಬೌಲರ್​ ಸೊಹೆಲ್ ತನ್ವೀರ್ ದಾಖಲೆ ಮುರಿದ್ರು. ಐಪಿಎಲ್​ ಮೊದಲ ಸೀಸನ್​ನಲ್ಲಿ ರಾಜಸ್ಥಾನ ರಾಯಲ್ಸ್ ಪ ಆಡಿದ್ದ ತನ್ವೀರ್, ಸಿಎಸ್​ಕೆ ವಿರುದ್ಧ 4 ಓವರ್ ಬೌಲ್ ಮಾಡಿ 14 ರನ್​ಗೆ 6 ವಿಕೆಟ್ ಪಡೆದಿದ್ದೇ ಐಪಿಎಲ್​ನಲ್ಲಿ ಈವರೆಗಿನ ಬೆಸ್ಟ್ ಬೌಲಿಂಗ್ ಫಿಗರ್ ಆಗಿತ್ತು.