ಮನೇಲಿ ಮಕ್ಕಳನ್ನಷ್ಟೇ ಬಿಟ್ಟು ಹೋಗುವ ಮೊದಲು ಹುಷಾರ್!

ಮಂಗಳೂರು: ಮನೇಲಿ ಇರ್ತಾಳೆ ಅಂತಾ ಮಗಳನ್ನೊಬ್ಬಳನ್ನೆ ಬಿಟ್ಟು ಹೊರಹೋಗಿದ್ದ ಪೋಷಕರು ವಾಪಸ್​ ಮನೆಯೊಳಗೆ ಬರಲು ಸರ್ಕಸ್​ ನಡೆಸಿದ ಘಟನೆ ಮಂಗಳೂರಿನ ಅಪಾರ್ಟ್​ಮೆಂಟ್​ವೊಂದರಲ್ಲಿ ನಡೆದಿದೆ. ಎಲ್ಲರೂ ಹೊರಹೋಗಿದ್ರಿಂದ ಡೋರ್​​ ಲಾಕ್​​ ಮಾಡಿಕೊಂಡು ಮಲಗಿದ್ದ ಮಗಳು ನಿದ್ರೆಗೆ ಜಾರಿದ್ದಾಳೆ. ಎಷ್ಟು ಬಾಗಿಲು ತಟ್ಟಿದ್ರು, ಆಕೆ ಬಾಗಿಲು ತೆರೆಯಲ್ಲಿಲ್ವಂತೆ. ಹೀಗಾಗಿ ಗಾಬರಿಗೊಂಡ ಪೋಷಕರು ಅಗ್ನಿಶಾಮಕ ದಳಕ್ಕೆ ಕಾಲ್​ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬಂದು, ಏರಿಯಲ್​ ಲ್ಯಾಡರ್​ ಬಳಸಿ ಬಾಲ್ಕನಿಯಿಂದ ಮನೆಯೊಳಗೆ ಹೋಗಿ ಆಕೆಯನ್ನ ಎಚ್ಚರಿಸಿದ್ದಾರೆ. ಬಹುಮಹಡಿಯ ಕಟ್ಟಡವಾಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ, ಮನೆಯೊಳಗೆ ಪ್ರವೇಶಿಸಲು ಹರಸಾಹಸ ಪಡಬೇಕಾಯ್ತು. ಇನ್ನು ಪೋಷಕರು ಗಾಬರಿಗೊಂಡಿದ್ದರಿಂದ ಅಪಾರ್ಟ್ಮೆಂಟ್​ನಲ್ಲಿ ಕೆಲಕಾಲ ಆತಂಕದ ವಾತಾವರಣವೂ ನಿರ್ಮಾಣವಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv