ಮಹಾಘಟಬಂಧನ್​ಗೆ ಎಸ್​ಪಿ, ಬಿಎಸ್​ಪಿ ಶಾಕ್​..!

ಲಖೌನ್: ಉತ್ತರ ಪ್ರದೇಶದಲ್ಲಿ ಬಿಎಸ್​ಪಿ, ಎಸ್​ಪಿ ಮೈತ್ರಿ ಮಾಡಿಕೊಳ್ಳೋ ಮೂಲಕ ಮಹಾಘಟ​ಬಂಧನ್​ಗೆ ಬಿಗ್​ಶಾಕ್​ ಕೊಟ್ಟಿದೆ. ಲೋಕಸಮರದಲ್ಲಿ BSP, SP ಜಂಟಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಳ್ಳೋ ಮೂಲಕ ಕಾಂಗ್ರೆಸ್​ಗೆ ಮಾಯಾವತಿ, ಅಖಿಲೇಶ್ ಯಾದವ್​ ಟಕ್ಕರ್​ ಕೊಟ್ಟಿದ್ದಾರೆ. ಸೀಟು ಹಂಚಿಕೆ ಸೂತ್ರವನ್ನ ಫೈನಲ್​ ಮಾಡಿರೋ ಉಭಯ ಪಕ್ಷಗಳ ಮುಖಂಡರು, ಈ ಸಂಬಂಧ ಇಂದು ಸಭೆಯಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ.

ನಾಳೆ ಮಾಯಾವತಿ, ಅಖಿಲೇಶ್ ಯಾದವ್​ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ತಲಾ 37 ಕ್ಷೇತ್ರಗಳಲ್ಲಿ ಎಸ್​ಪಿ ಹಾಗೂ ಬಿಎಸ್​ಪಿ ಸ್ಪರ್ಧೆ ಮಾಡಲಿದ್ದು, 2 ಕ್ಷೇತ್ರಗಳನ್ನು ಆರ್​ಎಲ್​ಡಿಗೆ ಬಿಟ್ಟುಕೊಟ್ಟಿದೆ. ಅಮೇಥಿ, ರಾಯಬರೇಲಿಯನ್ನ ಕಾಂಗ್ರೆಸ್​ಗೆ ಮೈತ್ರಿ ಪಕ್ಷಗಳು ಬಿಟ್ಟು ಕೊಟ್ಟಿವೆ. ತಲಾ 1 ಕ್ಷೇತ್ರ ಓಂಪ್ರಕಾಶ್​ ರಾಜಭರ್, ಅಪ್ನಾದಲ್​ ಪಕ್ಷದ ಅನುಪ್ರಿಯ ಪಟೇಲ್​ಗೆ ನೀಡಲು ನಿರ್ಧರಿಸಲಾಗಿದೆ. ಒಟ್ಟು 80 ಕ್ಷೇತ್ರಗಳ ಪೈಕಿ ಎಲ್ಲಾ ಕ್ಷೇತ್ರಗಳ ಸೀಟು ಹಂಚಿಕೆ ಪಕ್ಕಾ ಆಗಿದ್ದು, ಮೋದಿ ವಿರುದ್ಧ ಮಹಾಮೈತ್ರಿಯ ಅಭ್ಯರ್ಥಿಯನ್ನ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.

ಪ್ರಧಾನಿ ಮೋದಿ, ಶಾಗೆ ಸಂಕಷ್ಟ

ಉತ್ತರಪ್ರದೇಶ ಸಂಸತ್​ ಅಖಾಡದಲ್ಲಿ ಬಿಎಸ್​ಪಿ, ಎಸ್​ಪಿ ಮೈತ್ರಿಯಿಂದಾಗಿ ಪ್ರಧಾನಿ ಮೋದಿ, ಅಮಿತ್​ ಶಾಗೆ ಸಂಕಷ್ಟ ಕಾದಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಟ್ಟು 39.67 % ಮತ ಲಭಿಸಿದ್ರೆ, ಸಮಾಜವಾದಿ ಪಕ್ಷಕ್ಕೆ 21.82%, ಬಹುಜನ ಸಮಾಜವಾದಿಗೆ 22.23% ಸಿಕ್ಕಿವೆ. ಈ ಅಂಕಿಅಂಶಗಳನ್ನು ಗಮನಿಸಿದ್ರೆ ಎಸ್​ಪಿ ಹಾಗೂ ಬಿಎಸ್​ಪಿ ಒಟ್ಟು ಮತಗಳ ಹಂಚಿಕೆ ಬಿಜೆಪಿಯನ್ನ ಮೀರಿಸುತ್ತೆ. ಮತದಾರರು ಕಾಂಗ್ರೆಸ್​ ಪಕ್ಷಕ್ಕೆ 6.25% ರಷ್ಟು ವೋಟ್​ ನೀಡಿದ್ದಾರೆ.