ತಿರುಪತಿ ಚಿನ್ನ ಹೆಸರಲ್ಲಿ ₹50 ಲಕ್ಷ ನಾಮ ಹಾಕಿದವ ಅಂದರ್​​

ಧಾರವಾಡ: ತಿರುಪತಿ ಚಿನ್ನ ಕೊಡುಸುವುದಾಗಿ ನಂಬಿಸಿ ₹50 ಲಕ್ಷ ವಂಚನೆ ಮಾಡಿದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮೋಹನ್​​ ಮೋಹನ್ ವಾಳ್ವೇಕರ್​​ನನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಶ್ವಿನ್ ಕುಮಾರ ಪಾಟೀಲ್​​​ ಎಂಬುವವರಿಗೆ ಆರೋಪಿ ವಂಚನೆ ಮಾಡಿದ್ದ. ಈ ಬಗ್ಗೆ ಜ.11ರಂದು ಉಪನಗರ ಠಾಣೆಯಲ್ಲಿ ದೂರು ನೀಡಿದ್ದರು. ಇನ್ನು ಅಶ್ವಿನ್​​​ ಮಹಾರಾಷ್ಟ್ರ ಮೂಲದವರೆಂದು ತಿಳಿದ ಬಂದಿದೆ. ಇನ್ನು ಆರೋಪಿ ಮೋಹನ್ ವಾಳ್ವೇಕರ್​​ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈಗಾಗಲೇ ಗಡಿಪಾರು ಆಗಿದ್ದರೂ, ಆರೋಪಿ ನಗರದಲ್ಲೇ ಓಡಾಡುತ್ತಿದ್ದ ಎಂದು ತಿಳಿದು ಬಂದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv