‘ದಲೈ ಲಾಮಾ ಹತ್ಯೆ ಸಂಚಿಗೂ, ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ’

ಹುಬ್ಬಳ್ಳಿ: ಬೌದ್ಧ ಧರ್ಮಗುರು ದಲೈ ಲಾಮಾ ಹತ್ಯೆ ಸಂಚಿಗೂ, ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ. ಆರೋಪಿಗಳನ್ನು ಬಂಧಿಸಿರುವುದು ಕೂಡಾ ಬೇರೆ ರಾಜ್ಯದಲ್ಲಿ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ಪಷ್ಟ ಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2018 ಜನೆವರಿ 19 ರಂದು ದಲೈ ಲಾಮಾ ಹತ್ಯೆಗೆ ಸಂಚು ರೂಪಿಸಿದ ವಿಚಾರವಾಗಿ ‘ನ್ಯಾಷನಲ್ ಇಂಟಲಿಜೆನ್ಸ್‌ ಏಜೆನ್ಸಿ’ಯವರು ಕೆಲ ಆರೋಪಿಗಳನ್ನು ಅಂದೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆ ಕುರಿತು ಎನ್ಐಎ ಈಗ ಚಾರ್ಜ್ ಶೀಟ್ ಸಲ್ಲಿಸಿದೆ. ಅದನ್ನೇ ಈಗ ದಲೈ ಲಾಮಾ ಹತ್ಯೆಗೆ ಸಂಚು ರೂಪಿಸಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ಪರಮೇಶ್ವರ್​ ಹೇಳಿದರು.
ರಾಜ್ಯ ರಾಜಕಾರಣದ ಕುರಿತು ಪ್ರತಿಕ್ರಿಯೆ ನೀಡಿದ ಪರಮೇಶ್ವರ್​, ರಾಜ್ಯದಲ್ಲಿ ಮೈತ್ರಿ ಸರ್ಕಾರ ಜನತೆಗೆ ಒಳ್ಳೆಯ ಆಡಳಿತ ನೀಡುವ ಉದ್ದೇಶದಿಂದಲೇ ಅಧಿಕಾರಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಒಳ್ಳೆಯ ಆಡಳಿತ ನೀಡುತ್ತಿದೆ. ಸರ್ಕಾರ ರಚನೆಯಾದ ಬಳಿಕ ಕೆಲ ದಿನಗಳ ಕಾಲ ಇಲಾಖೆಗಳಿಗೆ ಹಣ ಬಿಡುಗಡೆಗೆ ಆಗಿರಲಿಲ್ಲ. ಆದರೆ, ಈಗ ಎಲ್ಲಾ ಇಲಾಖೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಪರಮೇಶ್ವರ್​ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv