ಬಿಗ್ ಬಾಸ್ ಮನೆಯಲ್ಲಿ ಇದ್ದ ಆ 17 ಜನ ಈಗ ಏನ್ ಮಾಡ್ತಿದ್ದಾರೆ ಗೊತ್ತಾ?!

ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಜನ್ 5ರಲ್ಲಿ ಕಾಣಿಸಿಕೊಂಡ 17 ಮಂದಿ ಸ್ಪರ್ಧಿಗಳು ಈಗ ಏನ್ ಮಾಡ್ತಿರ್ತಾರೆ ಅನ್ನೋ ಕುತೂಹಲ ನಿಮಗೆ ಕಾಡೇ ಇರುತ್ತೆ ಅಲ್ವಾ? 11 ಮಂದಿ ಸೆಲೆಬ್ರೆಟಿಗಳು ಮತ್ತು 6 ಮಂದಿ ಜನ ಸಾಮಾನ್ಯರು ಈಗ ಏನ್ ಮಾಡ್ತಿದ್ದಾರೆ ಅನ್ನೊ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಜನ ಸಾಮಾನ್ಯರು-

ಸುಮಾ: ಮೈಸೂರು ಮೂಲದ ಸುಮಾ ಕಾಮನ್ ಮ್ಯಾನ್ ಕೆಟಗರಿಯಲ್ಲಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ರು. ಗೃಹಿಣಿ ಆಗಿರೋ ಸುಮಾ ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಹೊರ ಬಂದ್ರು. ಬಿಗ್ ಬಾಸ್ ಬಳಿಕ ಸುಮಾ ಈಗ ಹವ್ಯಾಸಕ್ಕಾಗಿ ಮ್ಯಾಜಿಕ್ ಶೋ ಕೊಡ್ತಿದ್ದಾರೆ.

ಮೇಘ: ಕೊಡಗಿನ ಮೇಘ ಕೂಡ ಬಿಗ್ ಬಾಸ್ ಸೀಸನ್ 5ರಲ್ಲಿ ಜನಸಾಮಾನ್ಯರ ಕೆಟಗರಿಯಲ್ಲಿ ಎಂಟ್ರಿ ಪಡೆದಿದ್ರು. ಆದ್ರೆ ಅದ್ಯಾಕೋ ಆಕೆ ಹೆಚ್ಚು ವಾರ ಬಿಗ್ ಬಾಸ್ ಮನೆಯೊಳಗೆ ಉಳಿಯಲಿಲ್ಲ. ಬಿಗ್ ಬಾಸ್ ಬಳಿಕ ಕಿರುತೆರೆ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಅದೃಷ್ಟ ಇನ್ನೂ ಆಕೆಯ ಕೈ ಹಿಡಿದಿಲ್ಲ.

ರಿಯಾಜ್: ವೃತ್ತಿಯಲ್ಲಿ ಆರ್ ಜೆ ಆಗಿರೋ ರಿಯಾಜ್, ಬಿಗ್ ಬಾಸ್ ಬಳಿಕ ಅದೇ ವೃತ್ತಿಯನ್ನೇ ಮುಂದುವರೆಸಿದ್ದಾರೆ. ಸ್ಟೇಜ್ ಶೋಗಳನ್ನ ಹೋಸ್ಟ್ ಮಾಡ್ತಿರೊ ರಿಯಾಜ್, ಕೈಯಲ್ಲಿ ಬಿಡುವಿಲ್ಲದಷ್ಟು ಶೋ ಗಳಿವೆ. ಕರ್ನಾಟಕ ಮಾತ್ರ ಅಲ್ಲದೇ ಗೋವಾ, ಮುಂಬೈ, ದೆಹಲಿಯಲ್ಲೂ  ಶೋ  ಹೋಸ್ಟ್ ಮಾಡ್ತಿದ್ದಾರೆ.

ಸಮೀರ್ ಆಚಾರ್ಯ: ಜನಸಾಮಾನ್ಯ ಸ್ಪರ್ಧಿಯಾಗಿ ಬಂದಿದ್ದ ಹುಬ್ಬಳ್ಳಿಯ ಪಂಡಿತ್ ಸಮೀರಾಚಾರ್ಯ ಇವರು ವೃತ್ತಿಯಲ್ಲಿ ಪುರೋಹಿತರು. ಆದ್ರೆ ಬಿಗ್ ಬಾಸ್ ಶೋ ಬಳಿಕ ಹುಬ್ಬಳ್ಳಿಯಲ್ಲಿ ಶಾಲೆಯೊಂದನ್ನ ಆರಂಭಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡೋ ಮೂಲಕ ಮಾದರಿ ಆಗಿದ್ದಾರೆ. ಜೊತೆಗೆ ಕಿರುತೆರೆ ಲೋಕದಲ್ಲೂ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. .

ನಿವೇದಿತ ಗೌಡ: ಬಿಗ್ ಬಾಸ್ ಮನೆಗೆ ಜನಸಾಮಾನ್ಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಮೈಸೂರಿನ ಡಬ್ ಸ್ಮ್ಯಾಷ್ ಬೆಡಗಿ ನಿವೇದಿತಾ ಗೌಡರಿಗೆ ಈಗ ಎಲ್ಲಿಲ್ಲದ ಬೇಡಿಕೆ. ಮೈಸೂರಿನ ಮಹಾಜನಸ್ ಕಾಲೇಜಿನ ವಿದ್ಯಾರ್ಥಿನಿ ಆಗಿರೋ ಈ ಗೊಂಬೆಗೆ ಕಿರುತೆರೆ, ಬೆಳ್ಳಿಪರದೆ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಬಹುಬೇಡಿಕೆ.ಆದ್ರೆ ಸದ್ಯಕ್ಕೆ ಎಜುಕೇಷನ್ ಮುಗಿಲಿ ಅಂತಿರೋ ಈಕೆ ಒಂದೆರೆಡು ಜಾಹೀರಾತುಗಳಲ್ಲಿ ಮಿಂಚಿದ್ದಾರೆ.

ದಿವಾಕರ್: ಕಾಮನ್ ಮೆನ್ ಕೆಟಗರಿಯಲ್ಲಿ ಎಂಟ್ರಿ ಪಡೆದಿದ್ದ ದಿವಾಕರ್ ಬಿಗ್ ಬಾಸ್ ಶೋ ಬಳಿಕ ಸ್ವಲ್ಪ ಚಿಂತೆಗೀಡಾಗಿದ್ರು. ರನ್ನರ್ ಅಪ್ ಆದ್ರೂ ಕೈ ನಲ್ಲಿ ಯಾವುದೇ ಪ್ರಾಜೆಕ್ಟ್ ಗಳು ಇಲ್ಲದೇ ಕಂಗಾಲಾಗಿದ್ರು. ಇದೀಗ ಅವರ ಅದೃಷ್ಟ ಖುಲಾಯಿಸ್ತಾ ಇದೆ. ಚಿಲ್ಲಂ ಅನ್ನೋ ಕನ್ನಡ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಕಲರ್ಸ್ ವಾಹಿನಿಯಲ್ಲಿ ಶುರು ಆಗ್ತಿರೊ ಮಜಾಭಾರತ್ ರಿಯಾಲಿಟಿ ಶೋನಲ್ಲೂ ದಿವಾಕರ್ ಕಾಣಿಸಿಕೊಳ್ಳಲಿದ್ದಾರೆ.

ಜಯ ಶ್ರೀನಿವಾಸನ್: ಇವರು ಖಾಸಗಿ ಚಾನೆಲ್​​ಗಳಲ್ಲಿ ಜ್ಯೋತಿಷ್ಯಗಳಿಗೆ ಸಂಬಂಧಿಸಿದಂತಹ ಶೋಗಳನ್ನು ನಡೆಸುತ್ತಿರುವ ಸಂಖ್ಯಾಶಾಸ್ತ್ರಜ್ಞರು. ಬಿಗ್ ಬಾಸ್ ಶೋ ಬಳಿಕ ಜಯ ಶ್ರೀನಿವಾಸನ್ ಅವರು ಬೆಳ್ಳಿ ಪರದೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಲು ಮುಂದಾಗಿದ್ದಾರೆ. Y5=X ಅನ್ನೊ ಸಿನಿಮಾದಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ಜೂನ್ ತಿಂಗಳಲ್ಲಿ ನಡೆಯಲಿದೆ. ಜೊತೆಗೆ ಬಿಜೆಪಿ ಸೇರ್ಪಡೆ ಆಗಿರೋ ಜಯ ಶ್ರೀನಿವಾಸನ್ ವಿಧಾನಸಭೆ ಚುನಾವನೆಯಲ್ಲಿ ಟಿಕೆಟಿಗಾಗಿ ಲಾಭಿ ಕೂಡ ನಡೆಸಿದ್ರು.

ಸೆಲೆಬ್ರಿಟಿಗಳು-

ದಯಾಳ್: ದಯಾಳ್ ಪದ್ಮನಾಭನ್ ಇವರು ಕನ್ನಡದ ನಿರ್ದೇಶಕ ಹಾಗೂ ನಟ. ಬಿಗ್ ಬಾಸ್ ರಿಯಾಲಿಟಿ ಶೋ ಬಳಿಕ “ಆ ಕರಾಳ ರಾತ್ರಿ” ಅನ್ನೋ ಸಿನಿಮಾ ನಿರ್ದೇಶಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಜೆ ಕೆ ಮತ್ತು ಅನುಪಮ ಗೌಡರನ್ನು ಹಾಕಿಕೊಂಡು ಚಿತ್ರ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೆ ಚಿತ್ರ ತೆರೆ ಮೇಲೆ ಬರಲಿದೆ.

ತೇಜಸ್ವಿನಿ ಪ್ರಕಾಶ್: ತೇಜಸ್ವಿನಿ ಪ್ರಕಾಶ್ ಅನೇಕ ಸಿನಿಮಾಗಳಲ್ಲಿ ಸಹನಟಿಯಾಗಿ, ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ‘ನಿಹಾರಿಕಾ’ ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಬಿಗ್ ಬಾಸ್ ಬಳಿಕ ಮತ್ತೆ ಬಣ್ಣದ ಲೋಕದಲ್ಲಿ ಮಿಂಚು ಹರಿಸಲು ಮುಂದಾಗಿದ್ದಾರೆ. ಕೈಲಿ ಒಂದಷ್ಟು ಪ್ರಾಜೆಕ್ಟುಗಳು ಇವೆ.

ಚಂದನ್ ಶೆಟ್ಟಿ: ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಈಗ ಬಿಡುವಿಲ್ಲದಷ್ಟು ಬ್ಯುಜಿ. ಕನ್ನಡ ಱಪರ್ ಚಂದನ್ ಶೆಟ್ಟಿಗೆ ಬಿಗ್ ಬಾಸ್ ಬಳಿಕ ದೇಶ ವಿದೇಶದಲ್ಲೂ ಬಹು ಬೇಡಿಕೆ. ಕಲರ್ಸ್ ವಾಹಿನಿಯಲ್ಲಿ ಬರ್ತಿರೊ ಮಾಸ್ಟರ್ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಲರ್ಸ್ ವಾಹಿನಿಯಲ್ಲಿ ಸದ್ಯದಲ್ಲೇ ಶುರು ಆಗ್ತಿರೊ ಮತ್ತೊಂದು ಮ್ಯೂಸಿಕಲ್ ರಿಲೆಟೆಡ್ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಚಂದನ್. ಫೈರ್ ಅನ್ನೋ ತಮ್ಮ ಮುಂದಿನ ಆಲ್ಬಂ ಸಾಂಗ್ ಶೂಟಿಂಗಿಗು ಸಿದ್ದತೆ ನಡೆದಿದೆ. ನಾಯಕನಾಗಿಯು ಅವಕಾಶಗಳು ಬಂದಿವೆ. ಕನ್ನಡ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡೊ ಅವಕಾಶಗಳು ಕೂಡ ಬಂದಿವೆ.

ಸಿಹಿ ಕಹಿ ಚಂದ್ರು: ನಟ, ನಿರ್ದೇಶಕ, ನಿರ್ಮಾಪಕರೂ ಆಗಿರೋ ಆಗಿರೊ ಸಿಹಿ ಕಹಿ ಚಂದ್ರು ಅಡುಗೆ ಸಂಬಂಧಿಸಿದ ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿಯೂ ಗಮನ ಸೆಳೆದವರು. ಬಿಗ್ ಬಾಸ್ ಬಳಿಕ ಕೆಎಫ್ ಸಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ರು. ಇದೀಗ ಮತ್ತೆ ಬಣ್ಣ ಹಚ್ಚಿದ್ದಾರೆ ಚಂದ್ರು. ಅಲ್ಲದೇ ಕಿರುತೆರೆ ಲೋಕದಲ್ಲಿ ಫೇಮಸ್ ಆಗಿದ್ದ ಪಾಪ ಪಾಂಡು ಸೀರಿಯಲ್​ನ ನಿರ್ಮಾಪಕರೂ ಆಗಿರುವ ಚಂದ್ರು, ಅದನ್ನು ಮತ್ತೆ ರಿಲಾಂಚ್ ಮಾಡಿದ್ದಾರೆ.

ಆಶಿತಾ ಚಂದ್ರಪ್ಪ: ‘ಜೊತೆ ಜೊತೆಯಲಿ’ ಸೀರಿಯಲ್ ಖ್ಯಾತಿಯ ಆಶಿತಾ ಚಂದ್ರಪ್ಪ, ಬಿಗ್ ಬಾಸ್ ಮನೆಯೊಳಗೆ ಟಫ್ ಸ್ಪರ್ಧಿ ಅನ್ನೋದಕ್ಕಿಂತ ಗಾಸಿಫ್ ಇಂದಾನೆ ಫೇಮಸ್ ಆಗಿದ್ರು. ಬಿಗ್ ಬಾಸ್ ಜರ್ನಿ ಬಳಿಕ ಬ್ರೇಕ್ ಗಾಗಿ ಎದುರು ನೋಡ್ತಾ ಇರೊ ಆಶಿತಾ ಕೈನಲ್ಲಿ ಒಂದಷ್ಟು ಪ್ರಾಜೆಕ್ಟ್ ಗಳು ಇವೆ. ಆದ್ರೆ ಯಾವುದೂ ಸೆಟ್ಟೇರಿಲ್ಲ. ಈ ನಡುವೆ ರಾಧಾ ರಮಣ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.

ಜಗನ್: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಗಾಂಧಾರಿ’ ಸೀರಿಯಲ್ ನ ಚಿರಾಯು ಸೇರಿದಂತೆ ಹಲವು ಸೀರಿಯಲ್ಲಿ ನಟಿಸಿದ್ದ ಜಗನ್ ಬಿಗ್ ಬಾಸ್ ಬಳಿಕ ಬೆಳ್ಳಿ ತೆರೆಯಲ್ಲಿ ಮಿಂಚಲು ಮುಂದಾಗಿದ್ದಾರೆ. ನಾಯಕನಾಗಿ ಅಭಿನಯಿಸುತ್ತಿರೋ ಚಿತ್ರ ಆಗಸ್ಟ್​​ನಲ್ಲಿ ಸೆಟ್ಟೇರಲಿದೆ. ಜೊತೆಗೆ ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಕೂಡ ಆರಂಭಿಸಿದ್ದಾರೆ.

ಕೃಷಿ ತಾಪಂಡ: ಅಕಿರಾ ಸಿನಿಮಾದ ನಟಿ ಕೃಷಿ ತಾಪಂಡ ಬಿಗ್ ಬಾಸ್ ಮನೆಯ ಮೋಸ್ಟ್ ಹಾಟ್ ಕಂಟೆಸ್ಟೆಂಟ್. ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾದ ನಾಯಕಿ ಕೂಡ ಹೌದು. ಬಿಗ್ ಬಾಸ್ ಬಳಿಕ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಕೃಷಿ ಕೈನಲ್ಲಿ ನಾಲ್ಕಾರು ಪ್ರಾಜೆಕ್ಟುಗಳಿವೆ, ಆದ್ರೆ ಯಾವುದು ಕೂಡ ಇನ್ನು ಸೆಟ್ಟೇರಿಲ್ಲ. ಈ ಮಧ್ಯೆ ಕಮರ್ಷಿಯಲ್ ಇವೆಂಟ್ಸ್, ಸ್ಟೇಜ್ ಶೋಗಳಲ್ಲಿ ಬ್ಯುಜಿ ಆಗಿರೋ ಕೃಷಿ ಅಭಿನಯದ ಹೊಸ ಚಿತ್ರ ಸಧ್ಯದಲ್ಲೆ ಸೆಟ್ಟೇರಲಿದೆ.

ಅನುಪಮ ಗೌಡ: ಅಕ್ಕ ಸೀರಿಯಲ್ ನಟಿ ಅನುಪಮಾ ಗೌಡ ಬಿಗ್ ಬಾಸ್ ಬಳಿಕ ಪುಲ್ ಬ್ಯುಜಿ ಆಗಿದ್ದಾರೆ. ನಿರ್ದೇಶಕ ದಯಾಳ್ ನಿರ್ಮಾಣದ ಆ ಕರಾಳ ರಾತ್ರಿಗಳು ಚಿತ್ರದ ನಾಯಕ ನಟಿ. ಈ ಮೂಲಕ ಬೆಳ್ಳಿ ಪರದೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನು ಕಲರ್ಸ್ ವಾಹಿನಿಯಲ್ಲಿ ಶುರು ಆಗ್ತಿರೊ ಹೊಸ ರಿಯಾಲಿಟಿ ಶೋ ಅನ್ನು ಹೋಸ್ಟ್ ಮಾಡ್ತಾ ಇದ್ದಾರೆ.ಇದಕ್ಕಾಗಿ ಭರ್ಜರಿ ಆಗಿ ರೆಡಿ ಆಗ್ತಾ ಇದ್ದಾರೆ.

ಶೃತಿ ಪ್ರಕಾಶ್: ಕರ್ನಾಟಕ ಮೂಲದವರಾದ್ರು ಮುಂಬೈನಲ್ಲಿ ನೆಲೆಸಿರೊ ಶೃತಿ ವೃತ್ತಿಯಲ್ಲಿ ಗಾಯಕಿ. ಬಿಗ್ ಬಾಸ್ ಬಳಿಕ ಶೃತಿ ಗೆ ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳು ಹುಡುಕಿ ಬರುತ್ತಿವೆ. ಲಂಡನ್ ನಲ್ಲಿ ಲಂಬೋದರ ಚಿತ್ರದಲ್ಲಿ ನಾಯಕ ನಟಿ ಆಗಿ ಅಭಿನಯಿಸುತ್ತಿರೊ ಈಕೆ ಕೈನಲ್ಲಿ ಹತ್ತಾರು ಪ್ರಾಜೆಕ್ಟ್ ಗಳಿವೆ.

ಜೆ ಕೆ:  ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದ ಸೂಪರ್ ಸ್ಟಾರ್ ಜೆ ಕೆ ಬಿಗ್​​ಬಾಸ್​ ಬಳಿಕ ಬ್ಯುಸಿಯಷ್ಟ್ ಪರ್ಸನ್. ಆ ಕರಾಳ ರಾತ್ರಿ, ಮೇ ಒಂದು ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಚಿತ್ರ ಸಧ್ಯದಲ್ಲೆ ಬಿಡುಗಡೆ ಆಗಲಿದೆ. ಜೊತೆಗೆ ಬಾಲಿವುಡ್ ನಲ್ಲೂ ಜೆ ಕೆ ಬ್ಯುಜಿ. ಪುಷ್ಪಾ ಐ ಹೇಟ್ ಟಿಯರ್ಸ್ ಅನ್ನೊ ಹಿಂದಿ ಚಿತ್ರದಲ್ಲೂ ನಟಿಸಿದ್ದಾರೆ.

ವಿಶೇಷ ಬರಹ: ಸೋಮಣ್ಣ ಮಾಚಿಮಾಡ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv