ನಾಳೆ ಆಲಮೇಲ ಪಟ್ಟಣ ಬಂದ್​​..!

ವಿಜಯಪುರ: ಬಜೆಟ್​​​​ನಲ್ಲಿ ಜಿಲ್ಲೆಯ ಆಲಮೇಲವನ್ನ ನೂತನ ತಾಲೂಕು ಘೋಷಣೆ ಮಾಡದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣವನ್ನ ತಾಲೂಕು ಮಾಡುವುದಾಗಿ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದರು. ಕುಮಾರಸ್ವಾಮಿ ಕೊಟ್ಟ ಮಾತನ್ನ ತಪ್ಪಿದಕ್ಕೆ ಅವರ ವಿರುದ್ಧ ವಿವಿಧ ಸಂಘಟನೆಗಳು ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಜೆಟ್​​​​ನಲ್ಲಿ ಕುಮಾರಸ್ವಾಮಿ ನಾಲ್ಕು ಹೊಸ ತಾಲೂಕುಗಳ ಘೋಷಣೆ ಮಾಡಿದ್ದಾರೆ. ಅದರಲ್ಲಿ ಆಲಮೇಲ ಹೆಸರು ಕೈ ಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿವಿಧ ಸಂಘಟನೆಗಳು ನಾಳೆ ಆಲಮೇಲ ಬಂದ್​​​​ಗೆ ಕರೆ ನೀಡಿದ್ದಾರೆ.