ಉಪ್ಪಿ, ಲಾರೆನ್ಸ್​ ಆಯ್ತು ಈಗ ಅಕ್ಕಿಗೆ ದೆವ್ವದ ಕಾಟ..!

ತಮಿಳು, ತೆಲುಗು ಹಾಗು ಕನ್ನಡದಲ್ಲಿ ಬಾಕ್ಸಾಫಿಸ್​ನ ಬಾಚಿಕೊಂಡ ಕಾಂಚನ ಸಿನಿಮಾ ಈಗ ಹಿಂದಿಯಲ್ಲಿ ತೆರೆಗೆ ಬರುವ ತಯಾರಿ ನಡೆದಿದೆ. ತಮಿಳಿನಲ್ಲಿ ಕಾಂಚನ ಆಗಿ, ನಂತ್ರ ಕಾಂಚನ-2 ಆಗಿ ಈಗ ಕಾಂಚನ-3 ಕೂಡ ರಿಲೀಸ್​ ಆಗಿದೆ. ಕನ್ನಡದಲ್ಲಿಉಪ್ಪಿ ಅಭಿನಯದಲ್ಲಿ ಕಲ್ಪನಾ ಹಾಗೂ ಕಲ್ಪನಾ-2 ಆಗಿ ರಿಲೀಸ್​ ಆಗಿ ಭರ್ಜರಿ ಸಕ್ಸಸ್​ ಕಂಡಿದೆ. ಈಗ ಸಿನಿಮಾದ ಸೃಷ್ಟಿಕರ್ತ ನಟ-ನಿರ್ದೇಶಕ ರಾಘವ ಲಾರೆನ್ಸ್​ ಈ ಸಿನಿಮಾವನ್ನ ಈಗ ಹಿಂದಿಯಲ್ಲಿ ಶುರು ಮಾಡಲು ರೆಡಿಯಾಗಿದ್ದಾರೆ. ಹಿಂದಿಯಲ್ಲಿ ಉಪ್ಪಿ ಹಾಗೂ ರಾಘವ ಲಾರೆನ್ಸ್​ ಮಾಡಿದ್ದ ಲೀಡ್​ ಪಾತ್ರವನ್ನ ಆ್ಯಕ್ಷನ್​ ಕಿಂಗ್​ ಅಕ್ಷಯ್​ಕುಮಾರ್ ಮಾಡಲಿದ್ದಾರೆ. ಇವ್ರಿಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ನಟಿಸಲಿದ್ದಾರೆ.
ಹಿಂದಿ ಕಾಂಚನಾಕ್ಕಾಗಿ ಕಥೆ ಕಂಪ್ಲೀಟ್​ ಚೇಂಜ್​..!
ಕಾಂಚನಾ ಹಾಗೂ ಕಲ್ಪನಾ ಸಿನಿಮಾಗಳಲ್ಲಿ ಇರುವಂತೆ ಹೀರೋಗೆ ದೆವ್ವ ಅಂದ್ರೆ ತುಂಬಾನೇ ಭಯ ಇರುತ್ತೆ. ಇವ್ರ ಮೈ ಮೇಲೆ ಮಂಗಳ ಮುಖಿ ಮತ್ತಿಬ್ಬರ ಆತ್ಮ ಬರುತ್ತೆ. ಆದ್ರೆ ಹಿಂದಿಯಲ್ಲಿ ಹೀರೋಗೆ ದೆವ್ವ ಅಂದ್ರೆ ಭಯ ಇರಲ್ಲ, ದೆವ್ವ ಭೂತ ಬರಲ್ಲ, ಆದ್ರೆ ನಾಯಕಿಯ ಮನೆಯಲ್ಲಿ ಆಗೋ ಬದಲಾವಣೆಗಳನ್ನ ಸರಿ ಮಾಡಲು ಹೋದಾಗ ಹೀರೋ ಮೈ ಯಲ್ಲಿ ಮಂಗಳಮುಖಿ ಹಾಗೂ ಮತ್ತಿಬ್ಬರ ಆತ್ಮ ಸೇರಿಕೊಳ್ತವೆ. ಸಿನಿಮಾದ ಮತ್ತೊಂದು ಮೇಜರ್ ಬದಲಾವಣೆ ಅಂದ್ರೆ ಹೀರೋ ಹಾಗೂ ಮಂಗಳ ಮುಖಿ ಎರಡೂ ಪಾತ್ರದಲ್ಲೂ ನಟ ಅಕ್ಷಯ್​ ಕುಮಾರೇ ನಟಿಸ್ತಾ ಇದ್ದಾರೆ. ಮಂಗಳಮುಖಿ ಪಾತ್ರವನ್ನ ಕನ್ನಡದಲ್ಲಿ ಸಾಯಿಕುಮಾರ್​, ತಮಿಳಿನಲ್ಲಿ ಶರತ್​ ಕುಮಾರ್ ನಟಿಸಿದ್ದಾರೆ.