ಹೊಸ ವರ್ಷದ ಮೊದಲ ದಿನ, ಬೆಳಗ್ಗೆ 5 ಗಂಟೆಗೆ ಅಕ್ಷಯ್ ಕುಮಾರ್ ಏನು ಮಾಡಿದ್ರು ಗೊತ್ತಾ..?!

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ನಟನೆಯಲ್ಲೂ ಸೈ ಫಿಟ್​ನೆಸ್​ನಲ್ಲೂ ಸೈ. ಫಿಟ್​ನೆಸ್​ ಅಂದ್ರೆ ಅಕ್ಷಯ್​ ಕುಮಾರ್​ ಅನ್ನೋ ಮಾತಿದೆ. ಯಾಕೆಂದರೆ ಅಕ್ಷಯ್​ ಕುಮಾರ್​ ತಮ್ಮ ಚಿಕ್ಕ ವಯಸ್ಸಿನಿಂದಲೇ ಫಿಟ್​ನೆಸ್​ಗೆ ಬಹಳ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇವರ ತಂದೆ ಆರ್ಮಿಯಲ್ಲಿ  ಸೇವೆ ಸಲ್ಲಿಸುತ್ತಿದ್ದುದರಿಂದ ಅಕ್ಷಯ್​ ಕೂಡಾ ಶಿಸ್ತಿನ ಸಿಪಾಯಿಯಾಗಿ ಬೆಳೆದರು. ಆದರೆ ಅಂದು ಕಲಿತ ಆ ಶಿಸ್ತನ್ನ ಅಕ್ಷಯ್​ ಇಂದಿನವರೆಗೂ ಕಾಪಾಡಿಕೊಂಡು ಬಂದಿದ್ದಾರೆ.

ಇನ್ನು ಹೊಸ ವರ್ಷದ ಮೊದಲ ಸೂರ್ಯೋದಯಲ್ಲಿ ಅಕ್ಷಯ್​ ಕುಮಾರ್​ ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದನ್ನ ಪೋಸ್ಟ್​ ಮಾಡಿದ್ದಾರೆ.  ಸೂರ್ಯೋದಯಲ್ಲಿ  ವರ್ಕೌಟ್​  ಮಾಡುವುದರಿಂದ ನನಗೆ ಹೆಚ್ಚಿನ  ಪ್ರೇರಣೆ  ಸಿಗುತ್ತದೆ.  ಈ ವರ್ಷ ಎರಡು  ಆಕ್ಷನ್-ಪ್ಯಾಕ್ ಸಿನಿಮಾಗಳನ್ನ ಮಾಡಲಿದ್ದೇನೆ. ಈ ಸಿನಿಮಾಗಳಿಗೆ ಇದು ಹೆಚ್ಚು ಸಹಾಯ ಮಾಡಲಿದೆ. ಅದರಂತೆ ನೀವು ಒಂದು ಗುರಿ ಹಾಕಿಕೊಂಡು, ಫಿಟ್ನೆಸ್​​ ಕಡೆ ಗಮನ ಹರಿಸಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯ ಎಂದು ವಿಶ್​ ಮಾಡಿದ್ದಾರೆ.