‘ಕೆಜಿಎಫ್​’ ಟೀಂ​ ಜೊತೆ ಅಜಯ್​ ಸಿನಿಮಾ..!

‘ಕನ್ನಡದ ಚಾಕೊಲೇಟ್​ ಹೀರೊ’ ಅಂದಾಕ್ಷಣ ನೆನಪಾಗುವ ನಟರಲ್ಲಿ ಅಜಯ್​ ರಾವ್​ ಕೂಡ ಒಬ್ಬರು. ರೊಮ್ಯಾಂಟಿಕ್​, ಆ್ಯಕ್ಷನ್​​, ಕಾಮಿಡಿ.. ಹೀಗೆ ಎಲ್ಲಾ ಜಾನರ್ ಚಿತ್ರಗಳಲ್ಲೂ ಅಜಯ್​ ತಮ್ಮದೇ ಫ್ಯಾನಿಸಂ ಗಿಟ್ಟಿಸಿಕೊಂಡಿದ್ದಾರೆ. ಪ್ರೇಕ್ಷಕರ ಕಣ್ಣಂಚಲ್ಲಿ ಕಂಬನಿ ತರಿಸ್ತಿದ್ದ, ಅಜಯ್​ ಆ್ಯಕ್ಷನ್​ನಲ್ಲೂ ಸೈ ಎನಿಸಿಕೊಂಡಿದ್ದರು. ಇದೀಗ ‘ಚಮಕ್’ ನಿರ್ಮಾಪಕರ ಜೊತೆಗೆ ಮತ್ತೊಂದು ಸೂಪರ್ ಹಿಟ್​ ಕೊಡೋಕೆ ಸಿದ್ಧವಾಗುತ್ತಿದ್ದಾರೆ.

ಮೇ ತಿಂಗಳಿಂದ ಶೂಟಿಂಗ್​..!
‘ಹ್ಯಾಟ್ರಿಕ್​ ಹಿಟ್​’ ಬಳಿಕ ನಿರ್ಮಾಪಕ ಟಿ.ಆರ್​.ಚಂದ್ರಶೇಖರ್​, ಅಜಯ್​ ರಾವ್​ ಜೊತೆಗೆ ಕೈ ಜೋಡಿಸಿದ್ದಾರೆ. ‘ಕೆಜಿಎಫ್’ ಟೀಂನಲ್ಲಿ ಸಹ ನಿರ್ದೇಶಕನಾಗಿ ದುಡಿದಿದ್ದ ತಿಮ್ಮೇಗೌಡ, ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಅಲ್ಲದೇ ಹತ್ತಾರು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಅನುಭವವಿದೆ. ಮೇ ತಿಂಗಳಿಂದ ಶೂಟಿಂಗ್​ ಆರಂಭವಾಗಲಿದ್ದು, ಇಷ್ಟರಲ್ಲೇ ಟೈಟಲ್​ ರಿವೀಲ್ ಆಗಲಿದೆ. ಸಿನಿಮಾಗೆ ‘ಕೃಷ್ಣನ್​ ಲವ್ ಸ್ಟೋರಿ’ಯಂತಹ ಮ್ಯೂಸಿಕಲ್ ಹಿಟ್​ ಕೊಟ್ಟಂತಹ ಶ್ರೀಧರ್​ ಸಂಭ್ರಮ್​ ಸಂಗೀತ ನಿರ್ದೇಶನ ಇರಲಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv