ಸಿಂಗಾಪುರದಲ್ಲಿ ‘ಆ್ಯಕ್ಷನ್​ ಕಿಂಗ್’ ಪುತ್ರಿಯ ಬರ್ತ್​ಡೇ ಸಂಭ್ರಮ..!

ಸ್ಯಾಂಡಲ್​ವುಡ್​ನ ಕ್ಯೂಟ್ ಕಪಲ್ ಅಂತಾನೇ ಫೇಮಸ್​ ಆಗಿರೋ ‘ಆ್ಯಕ್ಷನ್​ ಕಿಂಗ್’ ಅರ್ಜುನ್​ ಸರ್ಜಾ ಹಾಗೂ ನಿವೇದಿತಾ ಜೋಡಿ ಮೊನ್ನೆಯಷ್ಟೇ ಸಿಂಗಾಪುರದಲ್ಲಿ ಅದ್ಧೂರಿಯಾಗಿ 31ನೇ ಮದುವೆ ವಾರ್ಷಿಕೊತ್ಸವವನ್ನ ಆಚರಿಸಿಕೊಂಡಿದ್ರು. ಸಿನಿಮಾರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ನಿವೇದಿತಾರನ್ನು ವರಿಸಿದ್ದ ಅರ್ಜುನ್​ 31 ವರ್ಷಗಳ ಕಾಲ ಬದುಕು ನಡೆಸಿ ಅದೆಷ್ಟೋ ಜೋಡಿಗಳಿಗೆ ಮಾದರಿಯಾಗಿದ್ದಾರೆ. ಈ ಸಂಭ್ರಮದಲ್ಲಿ ಮಕ್ಕಳಾದ ಐಶ್ವರ್ಯ ಹಾಗೂ ಅಂಜನಾ ಕೂಡ ಭಾಗಿಯಾಗಿದ್ರು. ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡ ಬೆನ್ನಲ್ಲೇ ಮಗಳ ಬರ್ತ್‌ಡೇ ಸೆಲೆಬ್ರೇಷನ್‌ ಕೂಡ ಸಿಂಗಾಪುರದಲ್ಲಿಯೇ ನಡೆದಿದೆ.

ಹಡಗಿನಲ್ಲಿ ಬರ್ತ್‌ ಡೇ ಸೆಲೆಬ್ರೇಷನ್​..!
ವಿಶೇಷ ಅಂದ್ರೆ, ಸಿಂಗಾಪುರದಲ್ಲಿ ವೆಡ್ಡಿಂಗ್ ಆ್ಯನಿವರ್ಸಿರಿ ಸಂಭ್ರಮದ ಜೊತೆಯಲ್ಲೇ ಇಂದು ಮಗಳು ಐಶ್ವರ್ಯ ಬರ್ತ್​ಡೇಯನ್ನ ಆಚರಿಸಿದ್ದಾರೆ. ಹಡಗಿನಲ್ಲಿ ಕೇಕ್‌ ಕಟ್ ಮಾಡಿದ ಐಶ್ವರ್ಯಗೆ ತಂದೆ, ತಾಯಿ ಹಾಗೂ ಸಹೋದರಿ ವಿಶ್ ಮಾಡಿದರು. ಜೊತೆಗೆ ಸ್ನೇಹಿತರು ಕೂಡ ಐಶ್ವರ್ಯಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಆ್ಯನಿವರ್ಸರಿ ಹಾಗೂ ಬರ್ತ್‌ಡೇ ಹಿನ್ನೆಲೆಯಲ್ಲಿ ಸಿಂಗಾಪುರಕ್ಕೆ ಆಪ್ತ ಸ್ನೇಹಿತರ ಜೊತೆ ಅರ್ಜುನ್‌ ಸರ್ಜಾ ಫ್ಯಾಮಿಲಿ ತೆರಳಿದೆ.