ಯಲಹಂಕ ಬಳಿ ಭೀಕರ ವಿಮಾನಪಘಾತ, ಮನೆ ಮೇಲೆ ಬಿದ್ದ ವಿಮಾನ

ಬೆಂಗಳೂರು: ನಾಳೆಯಿಂದ ಐದು ದಿನಗಳ ಕಾಲ ಏರೋ ಶೋ ಆರಂಭವಾಗುವ ಹಿನ್ನೆಲೆಯಲ್ಲಿ ಯಲಹಂಕ ವಾಯು ನೆಲೆ ಬಳಿ ತಾಲೀಮು ನಡೆಸುತ್ತಿದ್ದ ಸೂರ್ಯಕಿರಣ್ ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಏರೋ ಶೋ ಹಿನ್ನೆಲೆಯಲ್ಲಿ ಆಗಸದಲ್ಲಿ ತಾಲೀಮು ನಡೆಸುತ್ತಿದ್ದ ವಿಮಾನಗಳು, ಬಹುಶಃ ಪೈಲಟ್​ಗಳ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿವೆ. ಈ ವೇಳೆ ಎಮರ್ಜನ್ಸಿ ಎಕ್ಸಿಟ್ ಮೂಲಕ ಎರಡೂ ವಿಮಾನದ ಪೈಲಟ್​ಗಳು ಇಜೆಕ್ಟ್ ಆಗಿದ್ದಾರೆ ಎನ್ನಲಾಗಿದೆ. ಹೀಗಿದ್ದೂ, ಇಬ್ಬರು ಪೈಲಟ್​ಗಳಲ್ಲಿ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಪ್ರತ್ಯಕ್ಷ ದರ್ಶಿಗಳು ಹೇಳುವಂತೆ, ವಿಮಾನ ಮನೆಯೊಂದರ ಬಳಿ ಬಿದ್ದಿದೆ ಎನ್ನಲಾಗಿದ್ದು, ಆ ಮನೆಯ ಶೇ.80ರಷ್ಟು ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ, ಆ ಮನೆಯಲ್ಲಿ ಯಾರಾದರೂ ಇದ್ದರಾ? ಅಥವಾ ಇರಲಿಲ್ಲವಾ? ಅನ್ನೋ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಇನ್ನು ಒಂದು ವಿಮಾನ ಮನೆಯೊಂದಕ್ಕೆ ಡಿಕ್ಕಿ ಹೊಡೆದಿದ್ದು, ಇನ್ನೊಂದು ವಿಮಾನ ಖಾಲಿ ಜಾಗದಲ್ಲಿ ಬಿದ್ದು ಉರಿದಿದೆ.


Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv