ಪ್ರಧಾನಿ ಮೋದಿಯಿಂದ ಕರ್ನಾಟಕದ ಜನತೆಗೆ ಅವಮಾನ -ಬಿ.ಕೆ.ಹರಿಪ್ರಸಾದ್

ಉಡುಪಿ: ಕರ್ನಾಟಕದ ಜನರನ್ನ ನಾಯಿಗಳಿಗೆ ಹೋಲಿಸಿ ಪ್ರದಾನಿ ಮೋದಿ ನಮ್ಮನೆಲ್ಲರನ್ನ ಅವಮಾನ ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಇದು ಗ್ರಾಮ ಪಂಚಾಯತ್ ಸದಸ್ಯರಿಗಿಂತ ಕೀಳುಮಟ್ಟದ ಹೇಳಿಕೆ ಎಂದು ಮೋದಿ‌ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನೂ ಯೋಗಿ ಆದಿತ್ಯನಾಥ್ ಅಧಿಕಾರದ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಒಂದೇ ವರ್ಷದಲ್ಲಿ ಸಾವಿರ ನಕಲಿ ಎನ್‌ಕೌಂಟರ್ ಆಗಿದೆ. 55 ವರ್ಷದಲ್ಲಿ ಕರ್ನಾಟಕದಲ್ಲಿ ಇಷ್ಟು ನಕಲಿ ಎನ್ ಕೌಂಟರ್ ಆಗಿಲ್ಲ ಎಂದು ಯೋಗಿ ಆದಿತ್ಯನಾಥರನ್ನೂ ಟೀಕಿಸಿದರು.