ನೇಪಾಳಿಗರ ಪ್ರೀತಿಯ ನಿವೇದನೆಗೆ ರಾಜ್ಯದ ಗುಲಾಬಿ ಹೂಗಳು..!

ಫೆಬ್ರವರಿ 14ರಂದು ಎಲ್ಲೆಡೆ ವ್ಯಾಲೆಂಟೈನ್ಸ್ ಡೇ. ವ್ಯಾಲೆಂಟೈನ್ಸ್ ಡೇ ದಿನ ಬಂತು ಅಂದ್ರೆ ಗುಲಾಬಿ ಹೂವಿಗೆ ಭಾರೀ ಡಿಮ್ಯಾಂಡ್​. ಮಾರುಕಟ್ಟೆ ತುಂಬೆಲ್ಲಾ ಗುಲಾಬಿಯ ಕಂಪು ಆವರಿಸುತ್ತಿದೆ. ಭಾರತದ ಕೆಂಪು ಗುಲಾಬಿಗೆ ಭಾರೀ ಬೇಡಿಕೆ ಇದ್ದು,ವಿದೇಶಗಳಿಗೆ ಸಿಕ್ಕಾಪಟ್ಟೆ ರಫ್ತಾಗುತ್ತಿದೆ.

ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿದೆ. ಹೀಗಾಗಿ ನೇಪಾಳ, ಭಾರತದಿಂದ ಗುಲಾಬಿ ಹೂಗಳನ್ನು ಆಮದು ಮಾಡಿಕೊಳ್ಳುತ್ತಿದೆ. ನೇಪಾಳದ ಫ್ಲೋರಿ ಕಲ್ಚರ್ ಅಸೋಸಿಯೇಷನ್ 15 ಮಿಲಿಯನ್ ನೇಪಾಳ ರೂಪಾಯಿ ಮೌಲ್ಯದ ಒಟ್ಟು 1,60,000 ಗುಲಾಬಿ ಹೂಗಳನ್ನು ಆಮದು ಮಾಡಿಕೊಳ್ಳಲಿದೆ ಎಂದು ಮಾಹಿತಿ ನೀಡಿದೆ. ಈ ಬಗ್ಗೆ ಮಾತನಾಡಿರುವ ಫ್ಲೋರಿಕಲ್ಚರ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಕಸ್ಜೋ ಶ್ರೆಸ್ತಾ, ವಿಶೇಷವಾಗಿ ನಾವು ಗುಲಾಬಿ ಹೂಗಳನ್ನು ಕೊಲ್ಕತ್ತಾ ಹಾಗೂ ಬೆಂಗಳೂರಿನಿಂದ ತರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ವರ್ಷ ಸುಮಾರು 2,00,000 ಗುಲಾಬಿ ಹೂಗಳು ನಮಗೆ ಬೇಕಾಗುತ್ತದೆ ಎಂದು ಅಂದಾಜಿಸಿದ್ದೇವೆ. ಇದರಲ್ಲಿ 1.5 ಲಕ್ಷ ಗುಲಾಬಿ ಹೂಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗುವುದು. ಈ ವರ್ಷ ಬೇಡಿಕೆ ಹೆಚ್ಚಿದೆ. ಕಠ್ಮಂಡುನಿವಿಂದ ಶೇ.60ರಷ್ಟು ಹೂಗಳ ಬೇಡಿಕೆ ಹೆಚ್ಚಾಗಿದೆ ಎಂದಿದ್ದಾರೆ.
ನೇಪಾಳದಲ್ಲಿ ತೀವ್ರ ಶೀತ ವಾತಾವರಣವಿದೆ. ಹಾಗಾಗಿ ಗುಲಾಬಿ ಉತ್ಪನ್ನ ನೇಪಾಳದಲ್ಲಿ ಇಳಿಮುಖವಾಗ್ತಿದೆ. ಹಾಗಾಗಿ ನಾವು ಭಾರತದಿಂದ ಗುಲಾಬಿಯನ್ನ ಆಮದು ಮಾಡಿಕೊಳ್ಳುವ ಮೂಲಕ ಗುಲಾಬಿ ಪ್ರಿಯರ ಬೇಡಿಕೆ ನೆರವೇರಿಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv