ನವ ಜೋಡಿಯ ದೇಶಪ್ರೇಮಕ್ಕೆ ಫಿದಾ ಆದ್ರು ಜನ..!

ವಡೋದರಾ: ಯೋಧರ ಮೇಲೆ ಪುಲ್ವಾಮಾದಲ್ಲಿ ನಡೆದ ಕೃತ್ಯವನ್ನ ಇಡೀ ದೇಶವೆ ಖಂಡಿಸಿ ಮರುಕ ವ್ಯಕ್ತಪಡಿಸಿದೆ. ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ದೇಶವೇ ನಮನ ಸಲ್ಲಿಸಿದೆ. ವಡೋದರಾದಲ್ಲಿ ನವ ಜೋಡಿಯೊಂದು ವಿಶೇಷವಾಗಿ ಯೋಧರಿಗೆ ಗೌರವ ಅರ್ಪಿಸಿ ಸುದ್ದಿಯಾಗಿದ್ದಾರೆ. ತಮ್ಮ ವಿವಾಹ ಕಾರ್ಯಕ್ರಮಕ್ಕೂ ಮುನ್ನಾ ರಥವನ್ನೇರಿದ ಇಬ್ಬರು ಭಾರತೀಯ ಬಾವುಟ ಹಿಡಿದು ಮೆರವಣಿಗೆ ಮಾಡಿದ್ರು. ಜೊತೆಗೆ ರಾಷ್ಟ್ರಪ್ರೇಮದ ಪೋಸ್ಟರ್​​ ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ. ದೇಶದಲ್ಲಿ 1427 ಹುಲಿಗಳು ಮಾತ್ರ ಉಳಿದಿವೆ ಅಂತ ಯಾರು ಹೇಳಿದ್ದು, 13 ಲಕ್ಷಕ್ಕೂ ಅಧಿಕ ಹುಲಿಗಳು ಗಡಿಯಲ್ಲಿ ರಕ್ಷಣೆಗೆ ನಿಂತಿವೆ ಅಂತಾ ಪೋಸ್ಟರ್​ ಹಿಡಿದು ಮೆರವಣಿಗೆ ಸಾಗಿದ್ರೆ, ಇವರಿಗೆ ದಾರಿಯುದ್ದಕ್ಕೂ ಜನರು ಬಾವುಟ ಹಿಡಿದು ಸ್ವಾಗತಿಸಿದ್ರು. ಇನ್ನು ಇವರು ಏರಿ ಹೊರಟ್ಟಿದ್ದ ಕುದುರೆ ಗಾಡಿಯನ್ನೂ ಕೂಡ ಬಾವುಟದಿಂದ ಅಲಂಕರಿಸಿದ್ದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv