ಗೋದಾಮಿನ ಮೇಲೆ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಬಿತ್ತನೆ ಬೀಜ ಪತ್ತೆ

ದಾವಣಗೆರೆ: ಜಗಳೂರು ಪಟ್ಟಣದ ಜೆಸಿಆರ್ ಬಡಾವಣೆಯಲ್ಲಿ ಬಿತ್ತನೆ ಕಡಲೆ ಬೀಜಗಳನ್ನು ಅಕ್ರಮವಾಗಿ ದಾಸ್ತಾನು ‌ಮಾಡಿದ್ದ ಗೋದಾಮಿನ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವೀರೇಶ್ ಹಾಗೂ ಜಗದೀಶ್ ಎನ್ನುವವರ ಗೋದಾಮಿನಲ್ಲಿ ರೈತರಿಗೆ ವಿತರಿಸಬೇಕಿದ್ದ ಕೃಷಿ ಇಲಾಖೆಯ ಸುಮಾರು 100 ಕ್ವಿಂಟಲ್​​​​ನಷ್ಟು ಬಿತ್ತನೆ ಕಡಲೆ ಬೀಜವನ್ನು ಅಕ್ರಮವಾಗಿ ದಾಸ್ತಾನು ಮಾಡಿಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿ ಬಸಣ್ಣ ನೇತೃತ್ವದ ತಂಡ, ದಾಳಿ ನಡೆಸಿ ಬಿತ್ತನೆ ಬೀಜವನ್ನು ವಶಪಡಿಸಿಕೊಂಡಿದೆ.

ರೈತರಿಗೆ ವಿತರಿಸಬೇಕಾಗಿದ್ದ ಬಿತ್ತನೆ ಬೀಜ ಎಲ್ಲಿಂದ ಬಂತು? ಹಾಗೂ ಈ ಅಕ್ರಮದ ಹಿಂದೆ ಯಾರ ಕೈವಾಡವಿದೆ? ಎನ್ನುವುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: conatct@firstnews.tv