ಲಂಕೆಗಿದೆ ಟೆರರಿಸ್ಟ್ ಸ್ಲೀಪರ್ ಸೆಲ್​ಗಳ ಭೀತಿ..!

ಕೊಲೊಂಬೊ: ಈಗಾಗಲೇ ಉಗ್ರರು ನಡೆಸಿದ ಬಾಂಬ್​ ಸ್ಫೋಟಗಳಿಂದ ಬೆಚ್ಚಿಬಿದ್ದಿರುವ ಶ್ರೀಲಂಕಾಗೆ ಮತ್ತೆ ದಾಳಿಯ ಆತಂಕ ಎದುರಾಗಿದೆ. ಇನ್ನೂ ಲಂಕೆಯಲ್ಲಿ ಉಗ್ರರ ಸ್ಲೀಪರ್ ಸೆಲ್​ಗಳು ಇದ್ದು, ಬಾಂಬ್ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಭದ್ರತಾ ಪಡೆಗಳು, ಈ ಸ್ಲೀಪರ್ ಸೆಲ್​ಗಳನ್ನ ಹುಡುಕಿ ಹುಡುಕಿ ದಾಳಿ ನಡೆಸ್ತಿವೆಯಂತೆ.

ಈಸ್ಟರ್ ಡೇ ದಿನ ನಡೆದ ಬಾಂಬ್ ದಾಳಿಗಳಿಗೆ ಸಂಬಂಧಿಸಿದಂತೆ ಹಲವು ಶಂಕಿತ ಉಗ್ರರನ್ನ ಬಂಧಿಸಲಾಗಿದೆ. ಇದೀಗ ಅವರನ್ನ ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದ್ದು, ಅವರಿಂದಲೇ ಸ್ಲೀಪರ್ ಸೆಲ್​ಗಳ ಮಾಹಿತಿ ಕಲೆ ಹಾಕಲಾಗ್ತಿದೆ ಎನ್ನಲಾಗಿದೆ. ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಕೂಡ ಎಚ್ಚರಿಕೆ ನೀಡಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಭದ್ರತಾ ಪಡೆಗಳಿಗೆ ಆದೇಶಿಸಿದ್ದಾರೆ.
39 ರಾಷ್ಟ್ರಗಳ ವೀಸಾ ರದ್ದುಗೊಳಿಸಿದ ಲಂಕಾ, ವಿದೇಶಿಯರ ಆಗಮನಕ್ಕೆ ನಿರ್ಬಂಧ ಹೇರುತ್ತಿದೆ. ಈಗಾಗಲೇ 39 ರಾಷ್ಟ್ರಗಳ ನಾಗರಿಕರಿಗೆ ವೀಸಾ ರದ್ದು ಮಾಡಿದೆ. ವೀಸಾ ನೀಡಲು ಯಾವುದೇ ತೊಂದರೆ ಇಲ್ಲ. ಆದ್ರೆ, ದೇಶದ ಭದ್ರತಾ ದೃಷ್ಠಿಯಿಂದ ವೀಸಾ ರದ್ದು ಮಾಡಿದ್ದೇವೆ. ವಿದೇಶಿಯರ ಕೈವಾಡದಿಂದ ದಾಳಿಗಳು ನಡೆದಿವೆ ಎಂದು ತನಿಖೆಗಳು ಹೇಳುತ್ತಿವೆ. ಹೀಗಾಗಿ ವಿದೇಶಿಯರ ಆಗಮನಕ್ಕೆ ತಡೆ ನೀಡಲಾಗಿದೆ ಎಂದಿದೆ.

2019ರ 3 ತಿಂಗಳಲ್ಲಿ ಲಂಕಾಗೆ ಒಟ್ಟು 7,40,600 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ವರ್ಷ 4,50,000 ಭಾರತೀಯರು ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದ್ದರು. ಈ ವರ್ಷದಲ್ಲಿ 10 ಲಕ್ಷ ಭಾರತೀಯರು ಭೇಟಿ ನೀಡುವರೆಂದು ನಿರೀಕ್ಷಿಸಲಾಗಿತ್ತು. ಆದ್ರೆ, ಈಗಿನ ಪರಿಸ್ಥಿತಿಯಿಂದಾಗಿ ಎಲ್ಲವೂ ಬದಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಜಾನ್ ಅಮರತುಂಗಾ ಹೇಳಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv