ಮುಂಬೈ ಇಂಡಿಯನ್ಸ್ ಫ್ಯಾನ್​ಗರ್ಲ್​ ಅದಿತಿ, ಕ್ರಿಕೆಟ್​ ಅಭಿಮಾನಿಗಳ ಹೊಸ ಕ್ರಷ್​..!

ಐಪಿಎಲ್​ 12 ಕೇವಲ ಕ್ರಿಕೆಟರ್ಸ್​ಗೆ ಮಾತ್ರ ನೇಮ್ ಫೇಮ್ ತಂದುಕೊಟ್ಟಿಲ್ಲ.ಐಪಿಎಲ್​ನಿಂದಾಗಿ ಕೆಲ ಲೇಡಿ ಫ್ಯಾನ್ಸ್ ಕೂಡ, ದಿನಬೆಳಗಾಗೋದ್ರಲ್ಲಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದಾರೆ.ಇದಕ್ಕೆ ಆರ್​ಸಿಬಿ ಫ್ಯಾನ್​ಗರ್ಲ್​ ದೀಪಿಕಾ ಘೋಷ್​ ಬೆಸ್ಟ್ ಎಕ್ಸಾಂಪಲ್.ಸನ್​ರೈಸರ್ಸ್ ಹೈದ್ರಬಾದ್​​ ವಿರುದ್ಧದ ಆರ್​ಸಿಬಿಯ ಕೊನೆಯ ಲೀಗ್​ಮ್ಯಾಚ್​​ ನೋಡೋಕೆ ಚಿನ್ನಸ್ವಾಮಿ ಅಂಗಳಕ್ಕೆ ಬಂದಿದ್ದ ದೀಪಿಕಾ, ಕ್ಯಾಮೆರಾಮನ್​ ಕೃಪೆಯಿಂದ ರಾತ್ರೋರಾತ್ರಿ ಯುವಕರ ಎದೆಗೆ ಕನ್ನಹಾಕಿದ್ರು.ಒಂದೇ ದಿನದಲ್ಲಿ ದೀಪಿಕಾ ಇನ್​ಸ್ಟ್ರಾಗಾಮ್​ ಫಾಲೋವರ್ಸ್​ ಸಂಖ್ಯೆ ಲಕ್ಷ ಮುಟ್ಟಿತು.ಈಗ, ಮುಂಬೈ ಇಂಡಿಯನ್ಸ್ ತಂಡದ ಫ್ಯಾನ್​ಗರ್ಲ್​​ ಅದಿತಿ ಹುಂಡಿಯಾ, ದೀಪಿಕಾರಂತೆ ಸುದ್ದಿ ಮಾಡುತ್ತಿದ್ದಾರೆ.ಹೈದ್ರಬಾದ್​​ನಲ್ಲಿ ನಡೆದ ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್​ ಕಿಂಗ್ಸ್ ಫೈನಲ್ ಪಂದ್ಯದಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ,ಅದಿತಿಯ ಹಾಟ್​ಲುಕ್​ಗೆ ಯುವಕರು ಬೋಲ್ಡ್ ಆಗಿದ್ದಾರೆ.ಜಿದ್ದಿಗೆ ಬಿದ್ದವರಂತೆ ಸೋಷಿಯಲ್ ಮೀಡಿಯಾದಲ್ಲಿ ಅದಿತಿಯನ್ನ ಫಾಲೋ ಮಾಡುತ್ತಿದ್ದಾರೆ.ಇದರಿಂದಾಗಿ ಅದಿತಿಯ ಇನ್​ಸ್ಟ್ರಾಗಾಮ್​,ಟ್ವಿಟರ್​ನಲ್ಲಿ ಫಾಲೋವರ್ಸ್​ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.ಮಾಡಲ್ ಆಗಿರೋ ಅದಿತಿ, 2018ರಲ್ಲಿ ಮಿಸ್ ದಿವಾ ಫಸ್ಟ್​ ರನ್ನರ್​ಅಫ್ ಆಗಿ ಹೊರಹೊಮ್ಮಿದ್ರು.ಅಲ್ಲದೇ 2018ರ ಮಿಸ್​​ ಸೂಪ್ರನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.21 ವರ್ಷ ವಯಸ್ಸಿನ ರಾಜಸ್ಥಾನ ಮೂಲದ ಅದಿತಿ, ಮುಂಬೈ ಇಂಡಿಯನ್ಸ್ ಸಪೋರ್ಟರ್​ ಮಾತ್ರ ಅಲ್ಲ.ಧೋನಿ ಹಾಗು ವಿರಾಟ್ ಕೊಹ್ಲಿಯ ಡೈಹಾರ್ಡ್​ ಫ್ಯಾನ್.