ಪಬ್​​​ಜಿ ಆಡ್ತಾ ಬ್ಯಾಟರಿ ಖಾಲಿ, ಚಾರ್ಜರ್​ ಕೊಡಲಿಲ್ಲ ಅಂತ ಚಾಕುವಿನಿಂದ ಇರಿದ

ಥಾಣೆ: ಪಬ್​​ಜಿ ಪ್ರೇಮಿಯೊಬ್ಬ ಚಾರ್ಜರ್​ ಕೊಡಲಿಲ್ಲ ಅಂತ ತನ್ನ ಭಾವಿ ಪತ್ನಿಯ ಸಹೋದರನ ಮೇಲೆ ಚಾಕುವಿನಿಂದ ದಾಳಿ ಮಾಡಿರೋ ಶಾಕಿಂಗ್​ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆರೋಪಿ ರಜನೀಶ್​ ರಾಜ್​​​ಭರ್​​, ಓಮ್​​​ ಭವದಾನ್​ಕರ್​ ಎಂಬವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಥಾಣೆ ಜಿಲ್ಲೆಯ ಕೋಲ್ಶೆವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಜನೀಶ್​ ರಾಜ್​​​ಭರ್ ಪಬ್​​​ಜಿ ಗೇಮ್​ ಆಡುವಾಗ ಫೋನ್ ಬ್ಯಾಟರಿ ಖಾಲಿಯಾಗಿದೆ. ಆಗ ಆತನಿಗೆ ಚಾರ್ಜರ್​ ಸಿಕ್ಕಿಲ್ಲ. ಹೀಗಾಗಿ ಮನೆಯಲ್ಲಿ ಜಗಳ ಶುರು ಮಾಡಿದ್ದಾನೆ. ಈ ವೇಳೆ ಮನೆಯಲ್ಲಿದ್ದ ತನ್ನ ಭಾವಿ ಪತ್ನಿಯ ಸಹೋದರನ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಫೆಬ್ರವರಿ 7 ರಂದು ಈ ಘಟನೆ ನಡೆದಿದ್ದು, ಫೆ.14ರಂದು ಪ್ರಕರಣ ದಾಖಲಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಸದ್ಯ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದ್ರೆ ಇನ್ನೂ ರಾಜ್​ಭರ್​​ನನ್ನು ಅರೆಸ್ಟ್​ ಮಾಡಿಲ್ಲ.