ಲೇಡಿ ಕ್ರಿಕೆಟಿಗರಿಗೆ​ ಕೊಹ್ಲಿ ಅಂದ್ರೆ ಇಷ್ಟ ಯಾಕೆ..?

ಟೀಮ್​ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಅಭಿಮಾನಿಗಳ ಮನಗೆಲ್ಲುವುದಷ್ಟೇ ಅಲ್ಲದೇ ಪ್ರಮುಖ ಮಹಿಳಾ ಕ್ರಿಕೆಟಿಗರ ಮನಸ್ಸನ್ನು ಕದ್ದಿದ್ದಾರೆ. ಈ ಹಿಂದೆ ಇಂಗ್ಲೆಂಡ್​ ಲೇಡಿ ಕ್ರಿಕೆಟರ್​​ ಡೇನಿಯಲ್​ ವ್ಯಾಟ್​ ಮನಸ್ಸು ಕದ್ದಿದ್ದ ಕೊಹ್ಲಿ, ಈಗ ದಕ್ಷಿಣಾ ಆಫ್ರಿಕಾದ ಪ್ರಮುಖ ಕ್ರಿಕೆಟ್​ ಆಟಗಾರರ್ತಿಯ ಮನಸ್ಸಿಗೆ ಕನ್ನ ಹಾಕಿದ್ದಾರೆ. ಹೌದು.. ವಿರಾಟ್​ ಕೊಹ್ಲಿ ಆಟಕ್ಕೆ ಮತ್ತೊಬ್ಬರು ಲೇಡಿ ಕ್ರಿಕೆಟರ್​ ಫಿದಾ ಆಗಿದ್ದಾರೆ. ಈ ಹಿಂದೆ ವಿರಾಟ್​ ಅಂದ್ರೆ ಪಂಚ ಪ್ರಾಣ ಅವಕಾಶ ಸಿಕ್ಕಿದ್ರೆ, ವಿರಾಟ್​ರನ್ನ ಮದುವೆ ಆಗುವುದಕ್ಕೂ ಸಿದ್ಧ ಎಂದಿದ್ದ ಇಂಗ್ಲೆಂಡ್​ ಲೇಡಿ ಕ್ರಿಕೆಟರ್​​ ಡೇನಿಯಲ್​ ವ್ಯಾಟ್ ಸುದ್ದಿಯಾಗಿದ್ರು. ಸದ್ಯ ಈ ಸಾಲಿನಲ್ಲಿ ದಕ್ಷಿಣ ಆಫ್ರಿಕಾದ ಲೇಡಿ ಕ್ರಿಕೆಟರ್​​ ಮರಿಝನ್ನೆ ಕಾಪ್ ಕೂಡ ಸೇರಿದ್ದಾರೆ. ವಿರಾಟ್​ ಆಟದಿಂದ ಆಫ್ರಿಕಾ ಮಹಿಳಾ ಕ್ರಿಕೆಟರ್​​ ಪ್ರಭಾವಿತರಾಗಿದ್ದಾರೆ. ಇತ್ತೀಚಿಗಷ್ಟೇ ಸಿಡ್ನಿಯಲ್ಲಿ ವಿರಾಟ್​​ರನ್ನ ಬೇಟಿಯಾಗಿರುವ ಕಾಪ್, ಫೋಟೋ ಕ್ಲಿಕ್ಕಿಸಿಕೊಂಡಿದ್ದು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ದೊಡ್ಡ ವ್ಯಕ್ತಿಯ ಜೋತೆ SCGಯಲ್ಲಿ ಒಂದು ಪೋಟೋ ಎಂದು ಬರೆದುಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv