ಅಫ್ಘಾನ್ ಪ್ಲೇಯರ್​​​ಗೆ ಮಾಹಿ ಕೊಟ್ಟ ವಿಶೇಷ ಗಿಫ್ಟ್ ಏನು..!

ಭಾರತ ಮತ್ತು ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಗಳು ವಿಶೇಷ ಸಂಬಂಧಗಳನ್ನ ಹೊಂದಿವೆ. ಇದಕ್ಕೆ ಬಿಸಿಸಿಐ ಅಫ್ಘಾನಿಸ್ತಾನ್​​​​ ಕ್ರಿಕೆಟ್​​​​​​​​ ಅಭಿವೃದ್ಧಿಗೆ ಬಿಸಿಐ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಇದಕ್ಕೆ ಪೂರಕವೆಂತೆ ಅಫ್ಘಾನ್ ಆಟಗಾರರ ಪ್ರಾಕ್ಟೀಸ್​​​​ಗೆ ಅನುಕೂಲವಾಗಲೆಂದು ಬಿಸಿಸಿಐ ಡೆಹರಡೂನ್ ಸ್ಟೇಡಿಯಂನ್ನ ದತ್ತು ಪಡೆದುಕೊಂದೆ. ಇದೀಗ ಅಫ್ಘಾನ್​​​​​ ಪ್ಲೇಯರ್​​​ಗೆ ಧೋನಿ ವಿಶೇಷ ಗಿಫ್ಟ್ ನೀಡುವ ಮೂಲಕ ಮತ್ತಷ್ಟು ಅಫ್ಘಾನ್ ಹಾಗೂ ಭಾರತ ನಡುವಿನ ಸ್ನೇಹವನ್ನ ಗಟ್ಟಿಗೊಳಿಸಿದ್ದಾರೆ.

ಅಫ್ಘಾನ್ ಪ್ಲೇಯರ್​​​ಗೆ  ಧೋನಿ ಗಿಫ್ಟ್
ಅಫ್ಘಾನ್​​​​​ ತಂಡದ ಕರೀಂ ಸಾದಿಕ್​​​ಗೆ ಮಹೇಂದ್ರ ಸಿಂಗ್ ಧೋನಿ ಹಾಗೂ ಸುರೇಶ್ ರೈನಾ ವೆಸ್ಟ್ ಇಂಡೀಸ್​​​​​​​​ನ ಡ್ವೇನ್ ಬ್ರಾವೋ ಅವರು ವಿಶೇಷ ಗಿಫ್ಟ್​​ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಈ ಮೂವರ ಆಟಗಾರರು ಕರೀಂ ಸಾದಿಕ್​​​ಗೆ ತಮ್ಮ ಸಿಎಸ್​​​​ಕೆ ತಂಡದ ಜರ್ಸಿ ಹಾಗೂ ಹಸ್ತಾಕ್ಷರ ಇರುವ ಕ್ರಿಕೆಟ್‌ ಬ್ಯಾಟ್​​​ನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನ ಕರೀಂ ಸಾದಿಕ್ ತಮ್ಮ ಟ್ವೀಟರ್​​​ನಲ್ಲಿ ಹಂಚಿಕೊಂಡು ಥ್ಯಾಕ್ಸ್ ಹೇಳಿದ್ದಾರೆ.